ADVERTISEMENT

'ಪಾಕಿಸ್ತಾನ ಕೋಗಿಲೆ' ಖ್ಯಾತಿಯ ಗಾಯಕಿ ನಯ್ಯಾರಾ ನೂರ್‌ ನಿಧನ

ಪಿಟಿಐ
Published 21 ಆಗಸ್ಟ್ 2022, 10:55 IST
Last Updated 21 ಆಗಸ್ಟ್ 2022, 10:55 IST
 ನಯ್ಯಾರಾ ನೂರ್‌
ನಯ್ಯಾರಾ ನೂರ್‌    

ಕರಾಚಿ (ಪಿಟಿಐ): ಪಾಕಿಸ್ತಾನದ ಖ್ಯಾತ ಗಾಯಕಿ ನಯ್ಯಾರಾ ನೂರ್‌ ಅವರು (71) ಅವರು ನಿಧನರಾಗಿದ್ದಾರೆ ಎಂದು ಅವರ ಕುಟುಂಬಸ್ಥರು ಭಾನುವಾರ ತಿಳಿಸಿದ್ದಾರೆ.ಕೆಲವು ಸಮಯದಿಂದ ಅವರು ಅನಾರೋಗ್ಯಕ್ಕೆ ಒಳಗಾಗಿ ಕರಾಚಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಮಾಧ್ಯಮಗಳು ವರದಿ ಮಾಡಿವೆ.

ನೂರ್‌ ತಮ್ಮ ಸುಮಧುರ ಕಂಠದಿಂದ ಗಡಿಯ ಹಂಗಿಲ್ಲದೆ ಭಾರತ–ಪಾಕಿಸ್ತಾನ ಎರಡೂ ದೇಶಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದರು.

ನೂರ್‌ 1950ರಲ್ಲಿ ಅಸ್ಸಾಂನ ಗುವಾಹಟಿಯಲ್ಲಿ ಜನಿಸಿದ್ದರು.1958ರಲ್ಲಿ ಇವರ ಕುಟುಂಬವು ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಲಾಹೋರ್‌ಗೆ ವಲಸೆ ಹೋಗಿತ್ತು.

ADVERTISEMENT

ಶಾಸ್ತ್ರೀಯವಾಗಿ ಸಂಗೀತವನ್ನು ಅಭ್ಯಾಸ ಮಾಡದ ಇವರು ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದರು. ನಂತರ ಯುನಿವರ್ಸಿಟಿ ರೇಡಿಯೊದಲ್ಲಿ ಹಾಡಲು ಆರಂಭಿಸಿದರು. 1971ರಲ್ಲಿ ಮೊದಲ ಬಾರಿಗೆ ಪಾಕಿಸ್ತಾನ ಟೆಲಿವಿಷನ್‌ ಧಾರಾವಾಹಿಗೆ ಹಾಡುವ ಮೂಲಕ ವೃತ್ತಿಜೀವನ ಆರಂಭಿಸಿದ್ದರು.2006ರಲ್ಲಿ ‘ಬುಲ್‌ಬುಲ್–ಎ–ಪಾಕಿಸ್ತಾನ’ (ಪಾಕಿಸ್ತಾನದ ಕೋಗಿಲೆ) ಗೌರವಕ್ಕೆ ಪಾತ್ರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.