ADVERTISEMENT

ಇಮ್ರಾನ್‌ ಬದಲಿಗೆ ಸಚಿನ್‌ ಫೊಟೊ: ಪಾಕ್‌ ಪ್ರಧಾನಿಯ ವಿಶೇಷ ಸಹಾಯಕ ಟ್ರೋಲ್‌

ಏಜೆನ್ಸೀಸ್
Published 22 ಜೂನ್ 2019, 13:12 IST
Last Updated 22 ಜೂನ್ 2019, 13:12 IST
   

ನವದೆಹಲಿ:ಮಾಜಿ ಕ್ರಿಕೆಟಿಗ, ಪಾಕಿಸ್ತಾನದ ಪ್ರಧಾನಮಂತ್ರಿಇಮ್ರಾನ್‌ ಖಾನ್‌ ಅವರ ವಿಶೇಷ ಸಹಾಯಕ ಟ್ವಿಟರ್‌ನಲ್ಲಿ ಯಡವಟ್ಟು ಮಾಡಿಕೊಂಡು ನೆಟ್‌ ಲೋಕದಲ್ಲಿ ಟ್ರೋಲ್‌ಗೆ ಒಳಗಾಗಿದ್ದಾರೆ.

ಪಾಕ್‌ ಪ್ರಧಾನಿ ಇಮ್ರಾನ್‌ ಅವರ ವಿಶೇಷ ಸಹಾಯಕ ನಯೀಮ್‌ ಉಲ್‌ ಹಕ್‌ ಅವರು ಶುಕ್ರವಾರ 1969ರಲ್ಲಿ ಇಮ್ರಾನ್‌ ಖಾನ್‌ ಎಂಬ ಶೀರ್ಷಿಕೆಯೊಂದಿಗೆ ಸಚಿನ್‌ ತೆಂಡೂಲ್ಕರ್‌ ಅವರ ಚಿತ್ರ ಪ್ರಕಟಿಸಿದರು! ಅವರು ಈ ತಪ್ಪು ಮಾಡುತ್ತಲೇ ಟ್ವಿಟ್ಟರಿಗರು ನಯೀಮ್‌ ಅವರನ್ನು ಭಾರೀ ಗೇಲಿ ಮಾಡಿದ್ದಾರೆ.

ನಯೀಮ್‌ ಉಲ್‌ ಹಕ್‌ ಅವರು ಆ ಚಿತ್ರ ಪ್ರಕಟಿಸುತ್ತಲೇವಿರಾಟ್‌ ಕೊಹ್ಲಿ ಅವರ ಚಿಕ್ಕಂದಿನ ಫೋಟೋವೊಂದನ್ನು ಟ್ವಿಟ್ಟರ್‌ನಲ್ಲಿ ಪ್ರಕಟಿಸಿದ ವ್ಯಕ್ತಿಯೊಬ್ಬರು 1976ರಲ್ಲಿ ಇಂಜಮಾಮ್‌ ಉಲ್‌ ಹಕ್‌ ಅವರು ಹೀಗಿದ್ದರು ಎಂದು ನಯೀಮ್‌ಗೆ ಟ್ಯಾಗ್‌ ಮಾಡಿ ಕಾಲೆಳೆದರು.

ADVERTISEMENT

ಇದಾದ ನಂತರ ಲಗಾನ್‌ ಚಿತ್ರದ ಸನ್ನಿವೇಶವೊಂದನ್ನು ಪ್ರಕಟಿಸಿದ ಟ್ವಿಟರಿಗರೊಬ್ಬರು, ಜೋಸ್‌ ಬಟ್ಲರ್‌ ಮತ್ತು ಅಶ್ವಿನ್‌ ಅವರ1980ರ ಚಿತ್ರ ಎಂದು ಶೀರ್ಷಿಕೆ ನೀಡಿ ನಯೀಮ್‌ ಅವರಿಗೆ ಟ್ಯಾಗ್‌ ಮಾಡಿ ಅಪಹಾಸ್ಯ ಮಾಡಿದರು.

ಮತ್ತೊಬ್ಬರು, ಆಕಳಿಸುತ್ತಿರುವ ಮಗುವೊಂದರ ಫೋಟೋ ಹಾಕಿ, 1987ರಲ್ಲಿ ಸರ್ಫರಾಜ್‌ ಖಾನ್‌ ಹೀಗಿದ್ದರು ಎಂದರು.


ಮತ್ತೊಬ್ಬರು ಧೋನಿ ಚಿತ್ರ ಪ್ರಕಟಿಸಿ 2007ರಲ್ಲಿ ಕಮ್ರಾನ್‌ ಅಕ್ಮಲ್‌ ಹೀಗಿದ್ದರು ಎಂದು ಗೇಲಿ ಮಾಡಿದರು.

ಇಷ್ಟಾದ ನಂತರವೂ ನಯೀಮ್‌ ಉಲ್‌ ಹಕ್‌ ಅವರು ತಮ್ಮ ಪೋಸ್ಟ್‌ ಅನ್ನು ತೆಗೆದು ಹಾಕಿಲ್ಲ. ನೆಟ್ಟಿಗರು ಗೇಲಿ ಮಾಡುವುದನ್ನು ನಿಲ್ಲಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.