ADVERTISEMENT

ದಾಳಿ ನಡೆದರೆ ಅಣ್ವಸ್ತ್ರ ಮೂಲಕ ಪ್ರತ್ಯುತ್ತರ: ಪಾಕ್‌ ಅಧ್ಯಕ್ಷ ಆರಿಫ್‌ ಅಲ್ವಿ

ಪಿಟಿಐ
Published 23 ಮಾರ್ಚ್ 2022, 14:01 IST
Last Updated 23 ಮಾರ್ಚ್ 2022, 14:01 IST
ಆರಿಫ್‌ ಅಲ್ವಿ
ಆರಿಫ್‌ ಅಲ್ವಿ   

ಇಸ್ಲಾಮಾಬಾದ್‌: ಪಾಕಿಸ್ತಾನವು ಅಣ್ವಸ್ತ್ರ ಹೊಂದಿರುವ ಒಂದು ಜವಾಬ್ದಾರಿಯುತ ರಾಷ್ಟ್ರ. ಒಂದು ವೇಳೆ ದಾಳಿ ನಡೆದರೆ ದೇಶವು ತನ್ನ ಸಂಪೂರ್ಣ ಬಲದೊಂದಿಗೆ ಪ್ರತ್ಯುತ್ತರ ನೀಡಲು ಹಿಂಜರಿಯುವುದಿಲ್ಲ ಎಂದು ಅಧ್ಯಕ್ಷ ಆರಿಫ್‌ ಅಲ್ವಿ ಬುಧವಾರ ಎಚ್ಚರಿಕೆ ನೀಡಿದ್ದಾರೆ.

ಇಲ್ಲಿ ಆಯೋಜಿಸಿದ್ದ ಪಾಕಿಸ್ತಾನ ದಿನದ ಪಥಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪಾಕಿಸ್ತಾನವು 75ನೇ ಸ್ವಾತಂತ್ರ್ಯ ವರ್ಷವನನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಇದು ನಮಗೆ ಬಹಳ ಮುಖ್ಯವಾಗಿದೆ. ನಮ್ಮ ಈ ಸ್ವಾತಂತ್ರ್ಯವನ್ನು ಕಾಪಾಡಲು ನಾವು ಸಾಧ್ಯವಾದ ಎಲ್ಲವನ್ನೂ ಮಾಡಲು ಬದ್ಧವಾಗಿದ್ದೇವೆ’ ಎಂದರು.

ದೇಶವನ್ನು ಆರ್ಥಿಕವಾಗಿ ಸದೃಢ ಮತ್ತು ಸಮೃದ್ಧಗೊಳಿಸುವ ಸಂಕಲ್ಪವನ್ನು ಅಲ್ವಿ ಅವರು ಪುನರುಚ್ಚರಿಸಿದರು.

1940ರ ಮಾರ್ಚ್‌ 23 ರಂದು ಭಾರತದಲ್ಲಿದ್ದ ಬ್ರಿಟೀಷ್‌ ಆಡಳಿತಕ್ಕೆ ಆಲ್‌ ಇಂಡಿಯಾ ಮುಸ್ಲಿಂ ಲೀಗ್‌ ಸಲ್ಲಿಸಿದ ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರದ ಬೇಡಿಕೆಯನ್ನು ಲಾಹೋರ್‌ನಲ್ಲಿ ಅಂಗೀಕರಿಸಿದ ದಿನದ ಹಿನ್ನೆಲೆಯಲ್ಲಿ ಪಾಕಿಸ್ತಾನ ದಿನ ಆಚರಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.