ADVERTISEMENT

ಪಾಕಿಸ್ತಾನ: 15 ಭಯೋತ್ಪಾದಕರ ಹತ್ಯೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 13:54 IST
Last Updated 18 ನವೆಂಬರ್ 2025, 13:54 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪೆಶಾವರ: ‘ತೆಹ್ರೀಕ್‌–ಇ–ತಾಲಿಬಾನ್‌ ಪಾಕಿಸ್ತಾನ್‌’ (ಟಿಟಿಪಿ) ಸಂಘಟನೆಯ 15 ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ’ ಎಂದು ಪಾಕಿಸ್ತಾನ ಸೇನೆ ಮಂಗಳವಾರ ತಿಳಿಸಿದೆ.  

ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದ ಡೇರಾ ಇಸ್ಮಾಯಿಲ್ ಖಾನ್ ಹಾಗೂ ಉತ್ತರ ವಝೀರಿಸ್ತಾನ್‌ ಜಿಲ್ಲೆಗಳಲ್ಲಿ ನ.15 ಮತ್ತು 16ರಂದು ಕಾರ್ಯಾಚರಣೆ ನಡೆಸಲಾಗಿದೆ ಎಂದು ಸೇನೆಯ ಮಾಧ್ಯಮ ವಿಭಾಗ ತಿಳಿಸಿದೆ.

ಸಂಘಟನೆಯ ಪ್ರಮುಖ ನಾಯಕ ಆಲಂ ಮೆಹ್ಸೂದ್‌ ಸೇರಿ 10 ಭಯೋತ್ಪಾದಕರನ್ನು ಡೇರಾ ಇಸ್ಮಾಯಿಲ್ ಖಾನ್‌ನಲ್ಲಿ ಹಾಗೂ ಇತರ ಐವರನ್ನು ಉತ್ತರ ವಝೀರಿಸ್ತಾನದಲ್ಲಿ ಹತ್ಯೆ ಮಾಡಲಾಗಿದೆ.  

ADVERTISEMENT

ಹತ್ಯೆಗೀಡಾದ ಎಲ್ಲ ಭಯೋತ್ಪಾದಕರು, ವಿದೇಶಿ ಜಾಲದೊಂದಿಗೆ ಸಂಪರ್ಕ ಹೊಂದಿದ್ದರು ಮತ್ತು ಹಲವು ದಾಳಿಗಳಲ್ಲಿ ಭಾಗಿಯಾಗಿದ್ದರು ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.