ADVERTISEMENT

ಕದನ ವಿರಾಮ ಉಲ್ಲಂಘನೆ ಆರೋಪ: ಪ್ರತಿಭಟನೆ ದಾಖಲಿಸಿದ ಪಾಕಿಸ್ತಾನ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 11:39 IST
Last Updated 17 ಆಗಸ್ಟ್ 2019, 11:39 IST
   

ಇಸ್ಲಾಮಾಬಾದ್: ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಬಳಿ ಭಾರತೀಯ ಪಡೆಗಳು ಕದನ ವಿರಾಮ ಉಲ್ಲಂಘಿಸಿವೆ ಎಂದು ಆರೋಪಿಸಿರುವ ಪಾಕಿಸ್ತಾನಶುಕ್ರವಾರ ಭಾರತೀಯ ರಾಯಭಾರಿಯನ್ನು ಕರೆಸಿ,ಪ್ರತಿಭಟನೆ ದಾಖಲಿಸಿದೆ.

ವಿದೇಶಾಂಗ ಕಚೇರಿಗೆಭಾರತೀಯ ಡೆಪ್ಯುಟಿ ಹೈ ಕಮಿಷನರ್ ಗೌರವ್ ಅಹ್ಲುವಾಲಿಯಾ ಅವರನ್ನು ಕರೆಸಿದ ಪಾಕ್, ಲಿಪಾ ಮತ್ತು ಬತ್ತಾಲ್ ಸೆಕ್ಟರ್‌ಗಳಲ್ಲಿ ನಡೆದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಇಬ್ಬರು ನಾಗರಿಕರು ಮತ್ತುಒಬ್ಬ ರಕ್ಷಣಾ ಸಿಬ್ಬಂದಿ ಮೃತರಾಗಿರುವ ಕುರಿತು ಭಾರತಕ್ಕೆ ಮಾಹಿತಿ ನೀಡಿದೆ. ಬಳಿಕ ಪ್ರತಿಭಟನೆ ದಾಖಲಿಸಿದೆ.

ಭಾರತೀಯ ಪಡೆಗಳು ಕದನ ವಿರಾಮವನ್ನು ಗೌರವಿಸುವಂತೆ ಭಾರತ ಸೂಚನೆ ನೀಡಬೇಕೆಂದುವಿದೇಶಾಂಗ ಕಚೇರಿಯ ವಕ್ತಾರ ಮಹಮ್ಮದ್ ಫೈಸಲ್ ಒತ್ತಾಯಿಸಿದ್ದಾರೆ.

ADVERTISEMENT

ವಿಶ್ವಸಂಸ್ಥೆಯ ರಕ್ಷಣಾ ಕೌನ್ಸಿಲ್‌ ನಿರ್ಣಯಗಳ ಪ್ರಕಾರ ಭಾರತವು, ಪಾಕಿಸ್ತಾನ ಮತ್ತು ಭಾರತದಲ್ಲಿ ವಿಶ್ವಸಂಸ್ಥೆಯ ಮಿಲಿಟರಿ ವೀಕ್ಷಕ ಗುಂಪುಗಳಿಗೆ ಅನುಮತಿ ನೀಡಬೇಕು ಎಂದು ಫೈಸಲ್ ಹೇಳಿದ್ದಾರೆ.

ಭಾರತದ ಕದನವಿರಾಮ ಉಲ್ಲಂಘನೆಯು ಪ್ರಾದೇಶಿಕ ಶಾಂತಿ ಮತ್ತು ರಕ್ಷಣೆಗೆ ಬೆದರಿಕೆಯುಂಟು ಮಾಡಿದೆ ಎಂದು ಪಾಕ್ ವಿದೇಶಾಂಗ ಕಚೇರಿಯ ವಕ್ತಾರರು ತಿಳಿಸಿದ್ದಾರೆ.

ಶುಕ್ರವಾರ ಬತ್ತಾಲ್ ಪಟ್ಟಣದಲ್ಲಿ ಭಾರತೀಯ ಪಡೆಗಳು ನಡೆಸಿದ ದಾಳಿಯಲ್ಲಿ ಪಾಕ್‌ನ ಒಬ್ಬ ಸೈನಿಕ ಸಾವಿಗೀಡಾಗಿದ್ದು, ಭಾರತೀಯ ಪಡೆಗಳ ದಾಳಿಗೆ ಇದುವರೆಗೆ ಒಟ್ಟು ಆರು ಮಂದಿ ಬಲಿಯಾಗಿದ್ದಾರೆ ಎಂದು ಪಾಕಿಸ್ತಾನದ ಮಿಲಿಟರಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.