ADVERTISEMENT

ಪಾಕಿಸ್ತಾನ: ಅಪಹರಿಸಲ್ಪಟ್ಟಿದ್ದ ಸಹಾಯಕ ಆಯುಕ್ತರ ಮಗ ಪತ್ತೆ

ಸಹಾಯಕ ಆಯುಕ್ತ ಮೊಹಮ್ಮದ್ ಅಫ್ಜಲ್ ಬಾಕಿಗಾಗಿ ಹುಡುಕಾಟ

ಪಿಟಿಐ
Published 18 ಅಕ್ಟೋಬರ್ 2025, 15:30 IST
Last Updated 18 ಅಕ್ಟೋಬರ್ 2025, 15:30 IST
   

ಕ್ವೆಟ್ವಾ: ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ ಪ್ರಾಂತ್ಯದ ಜಿಯಾರತ್‌ ಬಳಿ ಅಪಹರಿಸಲ್ಪಟ್ಟಿದ್ದ ಸಹಾಯಕ ಆಯುಕ್ತರ (ಎಸಿ) ಪುತ್ರನನ್ನು ಭದ್ರತಾ ಸಂಸ್ಥೆ ಪತ್ತೆ ಮಾಡಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಜಿಯಾರತ್‌ನ ಎಸಿ ಮೊಹಮ್ಮದ್ ಅಫ್ಜಲ್ ಬಾಕಿ ಮತ್ತು ಅವರ ಮಗನನ್ನು ಎರಡು ತಿಂಗಳ ಹಿಂದೆ ಅಪಹರಿಸಲಾಗಿತ್ತು.

‘ಎಸಿ ಅವರು ಇನ್ನೂ ಪತ್ತೆಯಾಗಿಲ್ಲ. ಸುರಕ್ಷಿತವಾಗಿ ಅವರನ್ನು ಕರೆತರಲು ಎಲ್ಲ ಪ್ರಯತ್ನಗಳು ನಡೆಯುತ್ತಿವೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಬಿಲಾಲ್‌ ಶೇಖ್‌ ಅವರು ತಿಳಿಸಿದ್ದಾರೆ.

ADVERTISEMENT

ಕುಟುಂಬದೊಂದಿಗೆ ಪಿಕ್ನಿಕ್‌ ಮುಗಿಸಿ ಹಿಂತಿರುಗುವಾಗ ಶಸ್ತ್ರಸಜ್ಜಿತ ವ್ಯಕ್ತಿಗಳು ಸರ್ಕಾರಿ ವಾಹನಕ್ಕೆ ಬೆಂಕಿ ಹಚ್ಚಿ, ಕುಟುಂಬದ ಸದಸ್ಯರು, ಭದ್ರತಾ ಸಿಬ್ಬದಿ ಮತ್ತು ಚಾಲಕನನ್ನು ಬಿಟ್ಟು ಎಸಿ ಮತ್ತು ಅವರ ಮಗನನ್ನು ಅಪಹರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.