ADVERTISEMENT

ಆಸೀಂ ಮುನೀರ್ ಅಧ್ಯಕ್ಷ: ವದಂತಿ ಅಲ್ಲಗಳೆದ ಪಾಕ್‌ ಸೇನೆ

ಪಿಟಿಐ
Published 6 ಆಗಸ್ಟ್ 2025, 14:35 IST
Last Updated 6 ಆಗಸ್ಟ್ 2025, 14:35 IST
<div class="paragraphs"><p>ಆಸೀಂ&nbsp;ಮುನೀರ್</p></div>

ಆಸೀಂ ಮುನೀರ್

   

ಇಸ್ಲಾಮಾಬಾದ್‌: ‘ಸೇನಾ ಮುಖ್ಯಸ್ಥ, ಜನರಲ್‌ ಆಸೀಂ ಮುನೀರ್ ಅವರು ಪಾಕಿಸ್ತಾನದ ಮುಂದಿನ ಅಧ್ಯಕ್ಷರಾಗಲಿದ್ದಾರೆ ಎನ್ನುವುದು ಆಧಾರ ರಹಿತ ವದಂತಿ’ ಎಂದು ಪಾಕ್‌ ಸೇನೆ ಹೇಳಿದೆ. 

ಪಾಕಿಸ್ತಾನದ ಮಾಜಿ ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ಬದಲು, ಮುನೀರ್‌ ಅಧ್ಯಕ್ಷ ಗಾದಿಗೆ ಏರಲಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಪಾಕ್‌ ಸೇನೆ ಸ್ಪಷ್ಟನೆ ನೀಡಿದೆ.

ADVERTISEMENT

‘ಸೇನಾ ಮುಖ್ಯಸ್ಥ ಆಸೀಂ ಮುನೀರ್ ಅವರಿಗೆ ದೇಶದ ಅಧ್ಯಕ್ಷರಾಗುವ ಆಸಕ್ತಿಯಾಗಲಿ ಅಥವಾ ಅಂತಹ ಯಾವುದೇ ಪ್ರಸ್ತಾಪವಾಗಲಿ ಪರಿಶೀಲನೆಯಲ್ಲಿ ಇಲ್ಲ’ ಎಂದು ಪಾಕ್‌ ಸೇನೆಯ ವಕ್ತಾರ ಲೆಫ್ಟಿನೆಂಟ್‌ ಅಹಮದ್‌ ಶರೀಫ್‌ ಚೌಧರಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಪಾಕಿಸ್ತಾನ್‌ ಟೆಲಿವಿಷನ್‌ (ಪಿಟಿವಿ) ಇದನ್ನು ಸಾಮಾಜಿಕ ಜಾಲತಾಣದಲ್ಲಿ ಅಧಿಕೃತವಾಗಿ ಪ್ರಕಟಿಸಿದೆ. 

‘ಸಾಮಾಜಿಕ ಜಾಲತಾಣದಲ್ಲಿ ದುರುದ್ದೇಶಪೂರಿತ ಪ್ರಚಾರ ನಡೆಯುತ್ತಿದೆ. ಮುನೀರ್‌ ಅವರ ಏಕೈಕ ಚಿಂತನೆ ಪಾಕಿಸ್ತಾನದ ಸುಸ್ಥಿರತೆಯೇ ಹೊರತು ಬೇರೇನೂ ಇಲ್ಲ’ ಎಂದು ಪಾಕಿಸ್ತಾನದ ಒಳಾಡಳಿತ ಸಚಿವ ಮೊಹ್ಸಿನ್‌ ನಖ್ವಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.