ಚಿತ್ರ ಕೃಪೆ : ಎಕ್ಸ್ col_chaubey
ಇಸ್ಲಾಮಾಬಾದ್: 2019ರಲ್ಲಿ ಭಾರತೀಯ ವಾಯುಪಡೆಯ ಪೈಲಟ್ ಅಭಿನಂದನ್ ವರ್ಧಮಾನ್ ಅವರನ್ನು ಸೆರೆ ಹಿಡಿದಿದ್ದ ಪಾಕಿಸ್ತಾನ ಸೇನೆಯ ವಿಶೇಷ ತಂಡದ ಅಧಿಕಾರಿ ತಾಲಿಬಾನ್ ಉಗ್ರರ ಜತೆಗಿನ ಹೋರಾಟದಲ್ಲಿ ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನದ ಸೇನೆ ತಿಳಿಸಿದೆ.
ಅಫ್ಗಾನಿಸ್ತಾನ ಗಡಿಗೆ ಹೊಂದಿಕೊಂಡಿರುವ ದಕ್ಷಿಣ ವಜೀರಿಸ್ತಾನದ ಸರಾರೊಘಾ ಪ್ರದೇಶದಲ್ಲಿ ತೆಹ್ರೀಕ್ ಎ ತಾಲಿಬಾನ್ ಪಾಕಿಸ್ತಾನ್ ಸಂಘಟನೆಯ ಉಗ್ರರ ಜತೆಗಿನ ಹೋರಾಟದಲ್ಲಿ 37 ವರ್ಷದ ಮೇಜರ್ ಸೈಯದ್ ಮೊಯಿಜ್ ಅಬ್ಬಾಸ್ ಶಾ ಮೃತಪಟ್ಟಿದ್ದಾರೆ ಎಂದು ಸೇನೆಯ ಮಾಧ್ಯಮ ವಿಭಾಗ ಹೆಳಿದೆ.
ಅಭಿನಂದನ್ ಅವರನ್ನು ಸೆರೆಹಿಡಿದಿದ್ದ ಸೇನಾ ತಂಡದಲ್ಲಿ ಅಬ್ಬಾಸ್ ಶಾ ಇದ್ದರು ಎಂದು ಪಾಕಿಸ್ತಾನ ಸೇನೆ ಹೇಳಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.