ADVERTISEMENT

ದ್ವಿಪಕ್ಷೀಯ ಸಂಬಂಧ: ಪಾಕ್‌–ಅಜರ್‌ಬೈಜಾನ್‌ ನಾಯಕರ ಮಾತುಕತೆ

ಪಿಟಿಐ
Published 28 ಮೇ 2025, 14:02 IST
Last Updated 28 ಮೇ 2025, 14:02 IST
ಶೆಹಬಾಜ್‌ ಷರೀಫ್‌
ಶೆಹಬಾಜ್‌ ಷರೀಫ್‌   

ಇಸ್ಲಾಮಾಬಾದ್‌: ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಮತ್ತು ಅಜರ್‌ಬೈಜಾನ್‌ ಅಧ್ಯಕ್ಷ ಇಲ್ಹಾಮ್‌ ಅಲಿಯೆವ್‌ ಅವರು ಪರಸ್ಪರ ಭೇಟಿ ಮಾಡಿ ಚರ್ಚಿಸಿದರು.

ಅಜರ್‌ಬೈಜಾನ್‌ನಲ್ಲಿನ ಲಾಚಿನ್‌ನಲ್ಲಿ ಮಂಗಳವಾರ ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳ ಕುರಿತು ಮಾತುಕತೆ ನಡೆಸಿದರು. ಎರಡೂ ದೇಶಗಳ ನಡುವಿನ ರಾಜಕೀಯ, ಆರ್ಥಿಕ, ರಕ್ಷಣಾ ಮತ್ತು ಸಾಂಸ್ಕೃತಿಕ ಸಂಬಂಧಗಳ ಕುರಿತು ಚರ್ಚೆ ಮಾಡಿದರು.

ಉಭಯ ದೇಶಗಳು ಪ್ರತಿ ಸಂದರ್ಭದಲ್ಲೂ ಪರಸ್ಪರರ ಬೆಂಬಲ ವ್ಯಕ್ತಪಡಿಸಿದ್ದು, ಅದನ್ನು ಮುಂದುವರಿಸಿಕೊಂಡು ಹೋಗುತ್ತವೆ ಎಂದು ಪಾಕ್‌ ಪ್ರಧಾನಿ ಷರೀಫ್‌ ತಿಳಿಸಿದರು.

ADVERTISEMENT

ಭಾರತ ಮತ್ತು ಪಾಕಿಸ್ತಾನದ ನಡುವೆ ಇತ್ತೀಚೆಗೆ ನಡೆದ ಸೇನಾ ಸಂಘರ್ಷದ ಸಂದರ್ಭದಲ್ಲಿ ಅಜರ್‌ಬೈಜಾನ್‌ ಪಾಕ್‌ಗೆ ದೃಢವಾದ ಬೆಂಬಲ ನೀಡಿದೆ. ಇದಕ್ಕಾಗಿ ಆ ದೇಶದ ನಾಯಕತ್ವ ಮತ್ತು ಜನರಿಗೆ ಧನ್ಯವಾದ ಅರ್ಪಿಸುವುದಾಗಿ ಅವರು ಹೇಳಿದರು.

ಇಲ್ಹಾಮ್‌ ಅಲಿಯೆವ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.