ADVERTISEMENT

ಕೋವಿಂದ್ ಪ್ರವಾಸಕ್ಕೆ ವಾಯುಪ್ರದೇಶ ಬಳಕೆ: ಭಾರತದ ಮನವಿ ತಿರಸ್ಕರಿಸಿದ ಪಾಕಿಸ್ತಾನ

ಪಿಟಿಐ
Published 7 ಸೆಪ್ಟೆಂಬರ್ 2019, 20:15 IST
Last Updated 7 ಸೆಪ್ಟೆಂಬರ್ 2019, 20:15 IST
   

ಇಸ್ಲಾಮಾಬಾದ್‌ (ಪಿಟಿಐ): ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರ ಯೂರೋಪ್‌ ಪ್ರವಾಸಕ್ಕೆ ಪಾಕಿಸ್ತಾನ ವಾಯುಪ್ರದೇಶ ಬಳಸಲು ಅನುಮತಿ ಕೋರಿದ್ದ ಭಾರತದ ಮನವಿಯನ್ನು ಪಾಕಿಸ್ತಾನ ತಿರಸ್ಕರಿಸಿದೆ.

ಪಾಕ್‌ ವಿದೇಶಾಂಗ ವ್ಯವಹಾರಗಳ ಸಚಿವ ಶಾ ಮೆಹಮೂದ್‌ಖುರೇಶಿ ಅನುಮತಿ ನಿರಾಕರಿಸಿರುವುದಾಗಿ ಶನಿವಾರ ಮಾಹಿತಿ ನೀಡಿದ್ದಾರೆ.

ಕಾಶ್ಮೀರದಲ್ಲಿ ಪ್ರಕ್ಷುಬ್ದ ಪರಿಸ್ಥಿತಿ ಇರುವುದರಿಂದಪ್ರಧಾನಿ ಇಮ್ರಾನ್‌ ಖಾನ್‌ ಈ ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ADVERTISEMENT

ಕೋವಿಂದ್‌ ಅವರ ಐಸ್‌ಲ್ಯಾಂಡ್‌, ಸ್ವಿಟ್ಜರ್‌ಲೆಂಡ್‌ ಮತ್ತು ಸ್ಲೊವೆನಿಯಾ ಪ್ರವಾಸ ಸೋಮವಾರ ಆರಂಭವಾಗಲಿದೆ.ಪುಲ್ವಾಮಾದಲ್ಲಿ ನಡೆದ ಆತ್ಮಾಹತ್ಯಾ ಬಾಂಬ್‌ ದಾಳಿ ಖಂಡಿಸಿ, ಭಾರತದ ವಾಯುಪಡೆ ಪಾಕಿಸ್ತಾನದ ಬಾಲಾಕೋಟ್‌ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಇದರಿಂದ ಮತ್ತಷ್ಟೂ ಆಕ್ರೋಶಗೊಂಡ ಪಾಕ್‌, ಫೆ. 26ರಿಂದ ತನ್ನ ವಾಯುಪ್ರದೇಶ ಬಳಕೆಗೆ ಅನುಮತಿ ನೀಡುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.