ADVERTISEMENT

ಪ್ರವಾಹ ಆಶೀರ್ವಾದದಂತೆ; ನೀರನ್ನು ಟಬ್‌ಗಳಲ್ಲಿ ಸಂಗ್ರಹಿಸಿ: ಪಾಕ್ ಸಚಿವ

ಏಜೆನ್ಸೀಸ್
Published 2 ಸೆಪ್ಟೆಂಬರ್ 2025, 11:35 IST
Last Updated 2 ಸೆಪ್ಟೆಂಬರ್ 2025, 11:35 IST
   

ಇಸ್ಲಾಮಾಬಾದ್: ಅತಿಯಾದ ಮಳೆಯಿಂದ ಉಂಟಾದ ಪ್ರವಾಹಕ್ಕೆ ಸಿಲುಕಿ ಸಾವಿರಾರು ಜನ ಸಂಕಷ್ಟಕ್ಕೆ ಸಿಲುಕಿದ್ದರ ನಡುವೆ ಪಾಕಿಸ್ತಾನದ ರಕ್ಷಣಾ ಸಚಿವ ಖಾವಾಜ್ ಆಸಿಫ್‌, ‘ಮಳೆಯನ್ನು ಆಶೀರ್ವಾದ ಎಂದು ಪರಿಗಣಿಸಬೇಕು, ಚರಂಡಿಗೆ ಬಿಡುವ ಬದಲು ಪ್ರವಾಹದ ನೀರನ್ನು ಜನರು ಟಬ್‌ಗಳಲ್ಲಿ ಸಂಗ್ರಹಿಸಿಡಬೇಕು’ ಎಂದು ಸಲಹೆ ನೀಡಿದ್ದಾರೆ. 

ಪಾಕಿಸ್ತಾನದ ದುನ್ಯಾ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಆಸಿಫ್, ‘ಪ್ರವಾಹದ ಸಂದರ್ಭದಲ್ಲಿ ಪ್ರತಿಭಟಿಸುತ್ತಿರುವ ಜನರು ಪ್ರವಾಹದ ನೀರನ್ನು ಮನೆಗೆ ತೆಗೆದುಕೊಂಡು ಹೋಗಬೇಕು. ಈ ನೀರನ್ನು ತಮ್ಮ ಮನೆಗಳಲ್ಲಿ, ಟಬ್‌ಗಳು ಮತ್ತು ಪಾತ್ರೆಗಳಲ್ಲಿ ಸಂಗ್ರಹಿಸಬೇಕು. ನಾವು ಈ ನೀರನ್ನು ಆಶೀರ್ವಾದದ ರೂಪದಲ್ಲಿ ನೋಡಬೇಕು. ಬೃಹತ್ ಯೋಜನೆಗಳಿಗಾಗಿ 10-15 ವರ್ಷ ಕಾಯುವ ಬದಲು, ತ್ವರಿತವಾಗಿ ಪೂರ್ಣಗೊಳ್ಳಬಹುದಾದ ಸಣ್ಣ ಅಣೆಕಟ್ಟುಗಳನ್ನು ಪಾಕಿಸ್ತಾನ ನಿರ್ಮಿಸಬೇಕು’ ಎಂದು ಹೇಳಿಕೆ ನೀಡಿದ್ದಾರೆ.

ಮಳೆಯಿಂದಾಗಿ ಪಾಕಿಸ್ತಾನದಲ್ಲಿ 2 ಲಕ್ಷಕ್ಕೂ ಅಧಿಕ ಜನರು ಸಂಕಷ್ಟ ಅನುಭವಿಸುತ್ತಿದ್ದು, ಸಾವಿರಕ್ಕೂ ಹೆಚ್ಚು ಜನರು ಮನೆಯನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಈ ನಡುವೆ ರಕ್ಷಣಾ ಸಚಿವರು ನೀಡಿರುವ ಸಲಹೆ ಜನರನ್ನು ಕೆರಳಿಸಿದೆ.

ADVERTISEMENT

ಪಾಕಿಸ್ತಾನದಲ್ಲಿ ಈ ವರ್ಷದ ಜೂನ್‌ 26 ರಿಂದ ಆ.31ರವರೆಗೆ ಮಳೆಗೆ ಸಂಬಂಧಿಸಿದ ವಿವಿಧ ಅವಘಡಗಳಿಂದ 854 ಜನ ಮೃತಪಟ್ಟಿದ್ದಾರೆ, ಸಾವಿರಕ್ಕೂ 1,100 ಜನ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿರುವುದಾಗಿ ಎನ್‌ಡಿಟಿವಿ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.