ADVERTISEMENT

ಭಾರತೀಯ ಕೈದಿಗಳ ವಿವರ ಹಸ್ತಾಂತರಿಸಿದ ಪಾಕಿಸ್ತಾನ

47 ನಾಗರಿಕರು, 270 ಮೀನುಗಾರರು ವಿವಿಧ ಜೈಲುಗಳಲ್ಲಿ ಬಂದಿ

ಪಿಟಿಐ
Published 1 ಜನವರಿ 2021, 14:30 IST
Last Updated 1 ಜನವರಿ 2021, 14:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಇಸ್ಲಾಮಾಬಾದ್‌: ಪಾಕಿಸ್ತಾನ ತನ್ನ ಜೈಲುಗಳಲ್ಲಿರುವ 319 ಭಾರತೀಯ ಕೈದಿಗಳ ಪಟ್ಟಿಯನ್ನು ಭಾರತದ ಹೈಕಮಿಷನ್‌ಗೆ ಶುಕ್ರವಾರ ಸಲ್ಲಿಸಿತು.

49 ಜನ ನಾಗರಿಕರು ಹಾಗೂ 270 ಮೀನುಗಾರರನ್ನು ದೇಶದ ವಿವಿಧ ಜೈಲುಗಳಲ್ಲಿರಿಸಲಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ (ಎಫ್‌ಒ) ತಿಳಿಸಿದೆ.

ಇದಕ್ಕೆ ಪ್ರತಿಯಾಗಿ, ಭಾರತವು ತನ್ನ ಜೈಲುಗಳಲ್ಲಿರುವ ಪಾಕಿಸ್ತಾನದ ಕೈದಿಗಳ ಹೆಸರಿರುವ ಪಟ್ಟಿಯನ್ನು ಒದಗಿಸಿದೆ. 263 ನಾಗರಿಕರು, 77 ಜನ ಮೀನುಗಾರರು ಸೇರಿದಂತೆ ಒಟ್ಟು 340 ಜನ ಕೈದಿಗಳು ದೇಶದ ವಿವಿಧ ಜೈಲುಗಳಲಿದ್ದಾರೆ ಎಂದು ಭಾರತ ತಿಳಿಸಿದೆ.

ADVERTISEMENT

ಉಭಯ ದೇಶಗಳ ಜೈಲುಗಳಲ್ಲಿರುವ ಕೈದಿಗಳ ಪಟ್ಟಿಯನ್ನು ವಿನಿಮಯ ಮಾಡಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ 2008ರ ಮೇ 21ರಂದು ಎರಡೂ ದೇಶಗಳ ನಡುವೆ ಒಪ್ಪಂದವಾಗಿದೆ. ಈ ಒಪ್ಪಂದ ಪ್ರಕಾರ, ಪ್ರತಿ ವರ್ಷ ಜನವರಿ 1 ಹಾಗೂ ಜುಲೈ 1ರಂದು ಕೈದಿಗಳ ಪಟ್ಟಿಯನ್ನು ಎರಡೂ ದೇಶಗಳು ವಿನಿಮಯ ಮಾಡಿಕೊಳ್ಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.