ADVERTISEMENT

ಲಸಿಕೆ ವಿತರಣೆ ನೀರಸ; ಪಾಕಿಸ್ತಾನದಲ್ಲಿ ಕೋವಿಡ್‌ 3ನೇ ಅಲೆ ಭೀತಿ: ತಜ್ಞರ ಎಚ್ಚರಿಕೆ

ಏಜೆನ್ಸೀಸ್
Published 2 ಮಾರ್ಚ್ 2021, 3:43 IST
Last Updated 2 ಮಾರ್ಚ್ 2021, 3:43 IST
   

ಇಸ್ಲಾಮಾಬಾದ್:‌ ಪಾಕಿಸ್ತಾನದಲ್ಲಿ ಕೋವಿಡ್‌-19 ನಿಯಂತ್ರಣದ ಸಲುವಾಗಿ ಹೇರಲಾಗಿದ್ದ ನಿಯಂತ್ರಣ ಕ್ರಮಗಳನ್ನು ಸಡಿಲಗೊಳಿಸಿರುವುದು ಸೋಂಕಿನ ಮೂರನೇ ಅಲೆ ಶುರುವಾಗಲು ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿರುವುದಾಗಿ ಡಾನ್‌ ಪತ್ರಿಕೆ ವರದಿ ಮಾಡಿದೆ.

ಮಾತ್ರವಲ್ಲದೆ,ಸರ್ಕಾರ ನಡೆಸುತ್ತಿರುವ ಲಸಿಕೆ ಅಭಿಯಾನಕ್ಕೆ ಆರೋಗ್ಯ ಕಾರ್ಯಕರ್ತರೂ ನಿರುತ್ಸಾಹ ತೋರುತ್ತಿದ್ದಾರೆ. ಇದರಿಂದ ಸೋಂಕು ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಸೋಮವಾರ ಒಂದೇದಿನ 1,176 ಪ್ರಕರಣಗಳು ದಾಖಲಾಗಿವೆ ಎಂದೂ ತಿಳಿಸಿದೆ.

ಪಾಕಿಸ್ತಾನದಲ್ಲಿ ಇದುವರೆಗೆ ಒಟ್ಟು 5,81,365 ಸೋಂಕು ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ12,896 ಮಂದಿ ಮೃತಪಟ್ಟಿದ್ದಾರೆ. ಉಳಿದಂತೆ5,46,371 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

ADVERTISEMENT

ಸೋಂಕು ನಿಯಂತ್ರಣದ ಉದ್ದೇಶದಿಂದ ವಾಣಿಜ್ಯ ಚಟುವಟಿಕೆಗಳು,ಶಾಲೆಗಳು, ಕಚೇರಿಗಳು ಮತ್ತು ಇತರ ಕಾರ್ಯಕ್ಷೇತ್ರಗಳಮೇಲೆ ಹೇರಲಾಗಿದ್ದ ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳನ್ನುಪಾಕಿಸ್ತಾನರಾಷ್ಟ್ರೀಯ ನಿರ್ದೇಶನ ಮತ್ತು ಕಾರ್ಯಾಚರಣೆ ಕೇಂದ್ರ ಫೆಬ್ರುವರಿ24 ರಂದು ಸಡಿಲಗೊಳಿಸಿತ್ತು.

ಈ ನಿರ್ದೇಶನದಂತೆ ವಾಣಿಜ್ಯ ಚಟುವಟಿಕೆಗಳ ಮೇಲಿದ್ದ ಮಿತಿ ಮತ್ತು ಕೆಲಸದ ಸ್ಥಳಗಳಲ್ಲಿ ಶೇ.50 ರಷ್ಟು ಹಾಜರಾತಿ ಕಾಯ್ದುಕೊಳ್ಳಬೇಕು ಎಂಬ ನಿಯಂತ್ರಣವನ್ನು ತೆಗೆದುಹಾಕಲಾಗಿದೆ.ಶಾಲೆಗಳು ಪೂರ್ಣ ಹಾಜರಾತಿಯೊಂದಿಗೆವಾರದಲ್ಲಿ ಐದು ದಿನ ತೆರೆಯಬೇಕು. ಮಾರ್ಚ್‌ 15 ರಿಂದ ಒಳಾಂಗಣದಲ್ಲಿ ವಿವಾಹ ಸಮಾರಂಭಗಳನ್ನು ನಡೆಸಲು, ಚಿತ್ರಮಂದಿರಗಳು ಹಾಗೂ ದೇವಾಲಯಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.