ಇಸ್ಲಾಮಾಬಾದ್/ನವದೆಹಲಿ: ಪ್ರಧಾನಿ ಮೋದಿ ಅವರ ವಿಮಾನ ತನ್ನ ವಾಯುಪ್ರದೇಶ ಹಾದುಹೋಗಲು ಪಾಕಿಸ್ತಾನ ಅನುಮತಿ ನಿರಾಕರಿಸಿದೆ.
ಇದೇ ಶುಕ್ರವಾರ ಮೋದಿ ಜರ್ಮನಿಗೆ ಹೋಗಲಿದ್ದಾರೆ. ಅವರ ವಿಮಾನ ಪಾಕಿಸ್ತಾನದ ವಾಯುಪ್ರದೇಶ ಹಾದುಹೋಗಬೇಕಿತ್ತು. ವಾಪಸ್ ಬರುವಾಗಲೂ ಇದೇ ವಾಯುಮಾರ್ಗ ಬಳಸಬೇಕಿತ್ತು. ಇದೇ ತಿಂಗಳ ಆರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ವಿಮಾನ ತನ್ನ ವಾಯುಪ್ರದೇಶ ಹಾದುಹೋಗಲು ಪಾಕ್ ನಿರಾಕರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.