ADVERTISEMENT

ಪಾಕ್‌ನಲ್ಲಿ 5000ಕ್ಕೂ ಅಧಿಕ ಕೋವಿಡ್‌-19 ಹೊಸ ಪ್ರಕರಣ

ಪಿಟಿಐ
Published 15 ಜೂನ್ 2020, 8:00 IST
Last Updated 15 ಜೂನ್ 2020, 8:00 IST
ಕೊರೊನಾ ವೈರಸ್‌ ಸೋಂಕು–ಸಾಂಕೇತಿಕ ಚಿತ್ರ
ಕೊರೊನಾ ವೈರಸ್‌ ಸೋಂಕು–ಸಾಂಕೇತಿಕ ಚಿತ್ರ   

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಹೊಸದಾಗಿ ಒಟ್ಟು 5,248 ಕೋವಿಡ್‌–19 ಪ್ರಕರಣಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ಸೋಂಕಿತರ ಒಟ್ಟು ಸಂಖ್ಯೆಯು 1,44,676ಕ್ಕೆ ಏರಿಕೆಯಾಗಿದೆ.

ಮತ್ತೆ 97 ಮಂದಿ ಕೋವಿಡ್‌ಗೆ ಬಲಿಯಾಗಿದ್ದು ಮೃತರ ಸಂಖ್ಯೆಯು 2,729ಕ್ಕೆ ಏರಿದೆ. ಒಟ್ಟು 53,721 ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.

ಹಿಂದಿನ 24 ಗಂಟೆಗಳಲ್ಲಿ ಒಟ್ಟು 29,085 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದುವರೆಗೂ ಒಟ್ಟು 8,97,650 ಮಂದಿಯ ತಪಾಸಣೆ ನಡೆಸಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ADVERTISEMENT

ಒಟ್ಟು ಪ್ರಕರಣಗಳ ಪೈಕಿ ಪಂಜಾಬ್‌ ಹಾಗೂ ಸಿಂಧ್‌ ಪ್ರಾಂತ್ಯಗಳಲ್ಲಿ ಕ್ರಮವಾಗಿ 54,138 ಮತ್ತು 53,805 ಪ್ರಕರಣಗಳು ಪತ್ತೆಯಾಗಿವೆ.

ಜುಲೈ ಅಂತ್ಯದ ವೇಳೆಗೆ ಪಾಕ್‌ನಲ್ಲಿ ಕೊರೊನಾ ವೈರಾಣುವಿನ ಸೋಂಕಿತರ ಸಂಖ್ಯೆಯು 12 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಸಚಿವ ಅಸಾದ್‌ ಉಮರ್, ಭಾನುವಾರ‌ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.