ADVERTISEMENT

ಪಾಕಿಸ್ತಾನ: 2025ರಲ್ಲಿ ಎರಡನೇ ಪೋಲಿಯೊ ಪ್ರಕರಣ ಪತ್ತೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2025, 13:36 IST
Last Updated 14 ಫೆಬ್ರುವರಿ 2025, 13:36 IST
<div class="paragraphs"><p>ಪಾಕಿಸ್ತಾನ: ಎರಡನೇ ಪೋಲಿಯೊ ಪ್ರಕರಣ ಪತ್ತೆ</p></div>

ಪಾಕಿಸ್ತಾನ: ಎರಡನೇ ಪೋಲಿಯೊ ಪ್ರಕರಣ ಪತ್ತೆ

   

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಈ ವರ್ಷ ಎರಡನೇ ಪೋಲಿಯೊ ವೈರಸ್‌ ಪ್ರಕರಣ ದೃಢಪಟ್ಟಿದೆ.

ಸಿಂಧ್‌ ಜಿಲ್ಲೆಯ ಬದಿನ್‌ನಲ್ಲಿ ಪೋಲಿಯೊ ವೈರಸ್‌ ಟೈಪ್ 1 (ಡಬ್ಲ್ಯುಪಿವಿ1) ದೃಢಪಟ್ಟಿದೆ ಎಂದು ಇಸ್ಲಾಮಾಬಾದ್‌ನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್ ಆಫ್‌ ಹೆಲ್ತ್‌ನಲ್ಲಿರುವ ಪ್ರಾದೇಶಿಕ ಪ್ರಯೋಗಾಲವು ತಿಳಿಸಿದೆ.

ADVERTISEMENT

ಪ್ರಸಕ್ತ ವರ್ಷದ ಮೊದಲ ಪ್ರಕರಣವು ದಕ್ಷಿಣ ಖೈಬರ್‌–ಪಖ್ತುಂಖ್ವಾದ ಡೇರಾ ಇಸ್ಲಾಯಿಲ್‌ ಖಾನ್‌ ನಗರದಲ್ಲಿ ಪತ್ತೆಯಾಗಿತ್ತು.

ಪಾಕಿಸ್ತಾನದಲ್ಲಿ 2024ರಲ್ಲಿ 74 ಪೋಲಿಯೊ ವೈರಸ್ ಪ್ರಕರಣಗಳು ಪತ್ತೆಯಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.