ADVERTISEMENT

ಪಾಕ್‌ನಲ್ಲಿ ಉಗ್ರರ ದಾಳಿ: 23 ಸಾವು

ದಾಳಿಯ ಹೊಣೆ ಹೊತ್ತ ತೆಹ್ರೀಕ್‌–ಎ–ತಾಲಿಬಾನ್‌ ಪಾಕಿಸ್ತಾನ

ಏಜೆನ್ಸೀಸ್
Published 11 ಅಕ್ಟೋಬರ್ 2025, 13:10 IST
Last Updated 11 ಅಕ್ಟೋಬರ್ 2025, 13:10 IST
<div class="paragraphs"><p>ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ ಹುತಾತ್ಮರಾದ ಪೊಲೀಸರಿಗೆ ಶನಿವಾರ ಅಂತಿಮ ನಮನ ಸಲ್ಲಿಸಲಾಯಿತು&nbsp; &nbsp; </p></div>

ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ ಹುತಾತ್ಮರಾದ ಪೊಲೀಸರಿಗೆ ಶನಿವಾರ ಅಂತಿಮ ನಮನ ಸಲ್ಲಿಸಲಾಯಿತು   

   

ಎಎಫ್‌ಪಿ ಚಿತ್ರ

ಪೆಶಾವರ: ಪಾಕಿಸ್ತಾನದ ವಾಯವ್ಯ ಭಾಗದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಪೊಲೀಸರು, ಅರೆಸೇನಾ ಪಡೆ ಸಿಬ್ಬಂದಿ ಸೇರಿದಂತೆ 23 ಮಂದಿ ಮೃತಪಟ್ಟಿದ್ದಾರೆ.

ADVERTISEMENT

ಅಫ್ಗಾನಿಸ್ತಾನದ ಗಡಿಗೆ ಹೊಂದಿಕೊಂಡಂತಿರುವ ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದ ಪೊಲೀಸ್‌ ತರಬೇತಿ ಶಾಲೆಯ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ. ತೆಹ್ರೀಕ್‌–ಎ–ತಾಲಿಬಾನ್‌ ಪಾಕಿಸ್ತಾನ (ಟಿಟಿಪಿ) ಸಂಘಟನೆಯು ಈ ದಾಳಿಯ ಹೊಣೆ ಹೊತ್ತುಕೊಂಡಿದೆ.

‘ಡೇರಾ ಇಸ್ಮಾಯಿಲ್‌ ಖಾನ್ ಜಿಲ್ಲೆಯಲ್ಲಿರುವ ಪೊಲೀಸ್‌ ತರಬೇತಿ ಶಾಲೆಯ ದ್ವಾರಕ್ಕೆ ಸ್ಫೋಟಕ ತುಂಬಿದ ಕಾರನ್ನು ಆತ್ಮಾಹುತಿ ಬಾಂಬರ್ ಶುಕ್ರವಾರ ಡಿಕ್ಕಿ ಹೊಡೆಸಿದ್ದರಿಂದ ಏಳು ಪೊಲೀಸರು ಮೃತಪಟ್ಟಿದ್ದು, 13 ಮಂದಿ ಗಾಯಗೊಂಡಿದ್ದಾರೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ಮುಹಮ್ಮದ್‌ ಹುಸೇನ್‌ ತಿಳಿಸಿದ್ದಾರೆ.

‘ಸ್ಫೋಟದ ನಂತರ ನಡೆದ ಗುಂಡಿನ ಚಕಮಕಿಯಲ್ಲಿ ಆರು ಉಗ್ರರು ಹತರಾಗಿದ್ದಾರೆ’ ಎಂದಿದ್ದಾರೆ.

‘ಖೈಬರ್ ಜಿಲ್ಲೆಯಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಅರೆಸೇನಾ ಪಡೆಯ 11 ಸಿಬ್ಬಂದಿ ಮೃತಪಟ್ಟಿದ್ದಾರೆ’ ಎಂದು ಹೇಳಿದ್ದಾರೆ.

‘ಬಾಜೌರ್‌ ಜಿಲ್ಲೆಯಲ್ಲಿ ಭಯೋತ್ಪಾದಕರು ಮತ್ತು ಅರೆಸೇನಾ ಪಡೆಗಳ ಮಧ್ಯೆ ನಡೆದ ಪ್ರತ್ಯೇಕ ಘರ್ಷಣೆಯಲ್ಲಿ ಮೂವರು ನಾಗರಿಕರು ಸೇರಿದಂತೆ ಐವರು ಮೃತರಾಗಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಪಾಕಿಸ್ತಾನವು ಕಾಬೂಲ್‌ನ ಸಾರ್ವಭೌಮ ಅಧಿಕಾರವನ್ನು ಉಲ್ಲಂಘಿಸಿದೆ’ ಎಂದು ಅಫ್ಗಾನಿಸ್ತಾನದ ತಾಲಿಬಾನ್ ಆಡಳಿತ ಆರೋಪಿಸಿದ ಕೆಲವೇ ಗಂಟೆಗಳಲ್ಲಿ ಉಗ್ರರ ದಾಳಿ ನಡೆದಿದೆ.

ಉಗ್ರರು ನಮ್ಮ ನೆಲದಲ್ಲಿ ಅಡಗಿರಲಿ ಇಲ್ಲವೇ ಅಫ್ಗನ್‌ ನೆಲದಲ್ಲೇ ಅವಿತಿರಲಿ. ಹುಡುಕಿ ಹೊಡೆಯುತ್ತೇವೆ. ನಮ್ಮ ಸಹನೆಗೂ ಮಿತಿ ಇದೆ
ಖ್ವಾಜಾ ಮುಹಮ್ಮದ್‌ ಆಸಿಫ್ ಪಾಕ್‌ನ ರಕ್ಷಣಾ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.