ADVERTISEMENT

ಪಾಕ್‌ ನಟಿ, ರೂಪದರ್ಶಿ ಹುಮೈರಾ ಅಸ್ಗರ್‌ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ!

8–9 ತಿಂಗಳ ಹಿಂದೆಯೇ ಹುಮೈರಾ ಸಾವು: ಮರಣೋತ್ತರ ಪರೀಕ್ಷೆ ವರದಿ

ಪಿಟಿಐ
Published 12 ಜುಲೈ 2025, 14:02 IST
Last Updated 12 ಜುಲೈ 2025, 14:02 IST
<div class="paragraphs"><p>ಹುಮೈರಾ ಅಸ್ಗರ್‌</p></div>

ಹುಮೈರಾ ಅಸ್ಗರ್‌

   

ಇನ್‌ಸ್ಟಾಗ್ರಾಮ್‌ ಚಿತ್ರ 

ಲಾಹೋರ್‌: ಪಾಕಿಸ್ತಾನಿ ನಟಿ, ರೂಪದರ್ಶಿ ಹುಮೈರಾ ಅಸ್ಗರ್‌ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆ 8–10 ತಿಂಗಳ ಹಿಂದೆಯೇ ಮೃತಪಟ್ಟಿದ್ದರು ಎಂದು ಮರಣೋತ್ತರ ‍ಪರೀಕ್ಷೆಯಿಂದ ತಿಳಿದುಬಂದಿದೆ.

ADVERTISEMENT

ಕರಾಚಿಯ  ಡಿಫೆನ್ಸ್ ಹೌಸಿಂಗ್‌ ಸೊಸೈಟಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಹುಮೈರಾ ವಾಸವಿದ್ದರು. ಅದೇ ಅಪಾರ್ಟ್‌ಮೆಂಟ್‌ನಲ್ಲಿ ಆಕೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶವ ತೀವ್ರವಾಗಿ ಕೊಳೆತಿರುವುದರಿಂದ ಆಕೆಯ ಸಾವಿಗೆ ಕಾರಣ ಏನು ಎಂಬುದು ಗೊತ್ತಾಗಿಲ್ಲ ಎಂದು ವರದಿ ತಿಳಿಸಿದೆ. 

ಸಿನೆಮಾ, ವಿವಿಧ ಟಿ.ವಿ. ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಹುಮೈರಾ, ಕರಾಚಿಯಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ಒಬ್ಬರೇ ವಾಸವಾಗಿದ್ದರು. ಕಳೆದ 6–7 ತಿಂಗಳಿಂದ ಆಕೆಯ ಮೊಬೈಲ್‌ ಸ್ವಿಚ್ ಆಫ್‌ ಆಗಿತ್ತು. ನಟಿ ಬಾಡಿಗೆ ಕಟ್ಟಿಲ್ಲವೆಂದು ಫ್ಲ್ಯಾಟ್‌ ಮಾಲೀಕ ದೂರು ನೀಡಿದದ್ದರು. ಬಳಿಕ, ಪೊಲೀಸರು ಮನೆ ಶೋಧಿಸಿದಾಗ ಆಕೆ ಮೃತದೇಹ ಪತ್ತೆಯಾಗಿದೆ. 

ಅಂತ್ಯಸಂಸ್ಕಾರ: ತಮ್ಮ ಇಚ್ಛೆಗೆ ವಿರುದ್ಧವಾಗಿ ಮಗಳು ನಟನೆ ಕ್ಷೇತ್ರಕ್ಕೆ ಕಾಲಿಟ್ಟಿದ್ದಳು ಎಂಬ ಬೇಸರದಲ್ಲಿದ್ದ ಹುಮೈರಾ ಕುಟುಂಬ ಆಕೆಯ ಮೃತದೇಹ ಹಿಂಪಡೆಯಲು ನಿರಾಕರಿಸಿತ್ತು. ಈ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿ, ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಹುಮೈರಾ ಅವರ ಸಹೋದರ ನವೀದ್‌ ಅಸ್ಗರ್‌ ಅವರು ಸಹೋದರಿಯ ಮೃತದೇಹ ಮತ್ತೆ ಪಡೆದು, ಶನಿವಾರ ಲಾಹೋರ್‌ನಲ್ಲಿ ಅಂತ್ಯಕ್ರಿಯೆ ನಡೆಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.