ADVERTISEMENT

ಪಾಕಿಸ್ತಾನ: 330 ಕೆ.ಜಿ ತೂಕದ ವ್ಯಕ್ತಿ ಸಾವು

ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ದೊರೆಯದೆ ಕೊನೆಯುಸಿರು

ಪಿಟಿಐ
Published 8 ಜುಲೈ 2019, 20:15 IST
Last Updated 8 ಜುಲೈ 2019, 20:15 IST

ಲಾಹೋರ್‌: ದಢೂತಿ ಮನುಷ್ಯ ಎಂದೇ ಕರೆಸಿಕೊಂಡಿದ್ದ 330 ಕೆ.ಜಿ ತೂಕದ ನೂರುಲ್‌ ಹಾಸನ್‌(55)ಸೋಮವಾರ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾರೆ.

ದೇಹದ ತೂಕ ಇಳಿಸಿಕೊಳ್ಳಲು ಲಿಪೋಸಕ್ಷನ್‌ ಶಸ್ತ್ರಚಿಕಿತ್ಸೆಗಾಗಿ ಸದೀಕಾಬಾದ್‌ನಿಂದ ಲಾಹೋರ್‌ಗೆ ನೂರುಲ್‌ ಅವರನ್ನು ಸೇನಾ ಹೆಲಿಕಾಪ್ಟರ್ ಮುಖಾಂತರ ಕರೆದುಕೊಂಡು ಬರಲಾಗಿತ್ತು. ಶಾಲ್ಮಾರ್‌ ಆಸ್ಪತ್ರೆಯಲ್ಲಿಜೂನ್‌ 28ರಂದು ಯಶಸ್ವೀ ಶಸ್ತ್ರಚಿಕಿತ್ಸೆ ಬಳಿಕ ಇವರನ್ನು ತೀವ್ರನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿತ್ತು. ತೀವ್ರನಿಗಾ ಘಟಕದಲ್ಲಿ ಸಿಬ್ಬಂದಿ ಕೊರತೆ ಉಂಟಾಗಿ ಹಸನ್‌ ಮೃತಪಟ್ಟಿದ್ದಾರೆ’ ಎಂದು ಡಾ.ಮಜೂಲ್‌ ಹಸನ್ ಡಾನ್‌ ಪತ್ರಿಕೆಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT