ADVERTISEMENT

ಪಾಕಿಸ್ತಾನ: ಗಿಲ್ಗಿಟ್, ಸ್ಕರ್ದುಗೆ ವಿಮಾನ ಸಂಚಾರ ರದ್ದುಗೊಳಿಸಿದ ಪಿಎಐ

ಪಿಟಿಐ
Published 30 ಏಪ್ರಿಲ್ 2025, 15:23 IST
Last Updated 30 ಏಪ್ರಿಲ್ 2025, 15:23 IST
<div class="paragraphs"><p>ವಿಮಾನ ಹಾರಾಟ</p></div>

ವಿಮಾನ ಹಾರಾಟ

   

ಇಸ್ಲಾಮಾಬಾದ್: ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಪಾಕಿಸ್ತಾನ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ (ಪಿಎಐ), ಪಾಕ್‌ ಆಕ್ರಮಿತ ಕಾಶ್ಮೀರದ ಗಿಲ್ಗಿಟ್‌ ಮತ್ತು ಸ್ಕರ್ದು ಸೇರಿದಂತೆ ಉತ್ತರ ಭಾಗದ ಕೆಲವು ಪ್ರದೇಶಗಳಿಗೆ ತನ್ನ ವಿಮಾನ ಸಂಚಾರವನ್ನು ರದ್ದುಗೊಳಿಸಿದೆ.

ಭಾರತದೊಂದಿಗಿನ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಭದ್ರತೆಯ ಕಾರಣಗಳಿಂದಾಗಿ ಪಿಎಐ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

ಕರಾಚಿ–ಸ್ಕರ್ದು ಮತ್ತು ಲಾಹೋರ್‌– ಸ್ಕರ್ದು ನಡುವೆ ಸಂಚರಿಸುವ ಎರಡು ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಜಂಗ್‌ ದಿನಪತ್ರಿಕೆ ವರದಿ ಮಾಡಿದೆ.

ಇಸ್ಲಾಮಾಬಾದ್‌–ಸ್ಕರ್ದು ನಡುವಣ ಎರಡು ವಿಮಾನ ಮತ್ತು ಇಸ್ಲಾಮಾಬಾದ್–ಗಿಲ್ಗಿಟ್‌ ನಡುವೆ ಸಂಚರಿಸುವ ನಾಲ್ಕು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಪಾಕಿಸ್ತಾನವು ತನ್ನ ವಾಯುಪ್ರದೇಶದ ಮೇಲಿನ ಕಣ್ಗಾಗಲು ತೀವ್ರಗೊಳಿಸಿದೆ ಎಂದು ‘ಎಕ್ಸ್‌ಪ್ರೆಸ್ ಟ್ರಿಬ್ಯೂನ್‌’ ವರದಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.