

ಗಾಜಾ ನಗರ, ಪ್ಯಾಲೆಸ್ಟೀನ್: ಅಮೆರಿಕದ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಹಾಗೂ ಹಮಾಸ್ ಬಂಡುಕೋರರ ನಡುವೆ ಏರ್ಪಟ್ಟ ಕದನ ವಿರಾಮ ಒಪ್ಪಂದದ ಭಾಗವಾಗಿ 15 ಪ್ಯಾಲೆಸ್ಟೀನಿಯನ್ನರ ಮೃತದೇಹಗಳನ್ನು ಇಸ್ರೇಲ್ ಹಸ್ತಾಂತರಿಸಿದೆ.
‘ರೆಡ್‌ಕ್ರಾಸ್ ಮುಖಾಂತರ ಇಸ್ರೇಲ್‌ನ ವಶದಲ್ಲಿರುವ 15 ಮಂದಿ ಹುತಾತ್ಮರ ಮೃತದೇಹಗಳು ಶುಕ್ರವಾರ ತಲುಪಿವೆ’ ಎಂದು ಇಲ್ಲಿನ ಆರೋಗ್ಯ ಸಚಿವಾಲಯವು ಘೋಷಣೆ ಮಾಡಿದೆ.
ಒಪ್ಪಂದದಂತೆ ಇದುವರೆಗೂ 330 ಮಂದಿ ಮೃತದೇಹ ಸ್ವೀಕರಿಸಲಾಗಿದೆ. ಇದುವರೆಗೂ 97 ಮಂದಿಯ ಮೃತದೇಹಗಳ ಗುರುತು ಪತ್ತೆಹಚ್ಚಲಾಗಿದೆ. 73 ವರ್ಷದ ಒತ್ತೆಯಾಳು ಮೆನಿ ಗೊಡಾರ್ಡ್ ಮೃತದೇಹವನ್ನು ರೆಡ್‌ಕ್ರಾಸ್ ಮೂಲಕ ಇಸ್ರೇಲ್‌ಗೆ ಗುರುವಾರ ಹಸ್ತಾಂತರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.