ADVERTISEMENT

ತೈವಾನ್‌ನಿಂದ ತೆರಳಿದ ನ್ಯಾನ್ಸಿ ಪೆಲೊಸಿ

taiwan

ಪಿಟಿಐ
Published 3 ಆಗಸ್ಟ್ 2022, 11:20 IST
Last Updated 3 ಆಗಸ್ಟ್ 2022, 11:20 IST
   

ತೈಪೆ: ಜಾಗತಿಕ ಒಗ್ಗಟ್ಟು ಮತ್ತು ಪ್ರಜಾಪ್ರಭುತ್ವ ರಕ್ಷಣೆಯ ಪ್ರತಿಜ್ಞೆ ಮಾಡಿದ ಅಮೆರಿಕದ ಸಂಸತ್ತಿನ ಸ್ಪೀಕರ್ ನ್ಯಾನ್ಸಿ ಪೆಲೊಸಿ ಬುಧವಾರ ತೈವಾನ್‌ನಿಂದ ವಾಪಸ್ ಆಗಿದ್ದಾರೆ.

ತೈಪೆಯಿಂದ ಅಮೆರಿಕದ ಮಿಲಿಟರಿಯ ವಿಶೇಷ ವಿಮಾನದಲ್ಲಿ ಅವರು ತೆರಳಿದರು.

ಚೀನಾದ ಮಿಲಿಟರಿಯಿಂದ ಬಂದ ಪ್ರತಿಕ್ರಿಯೆ ಮತ್ತು ಆಕ್ರೋಶದ ಹೇಳಿಕೆಗಳಿಗೆ ಸೊಪ್ಪು ಹಾಕದೆ ಅವರು ಈ ಭೇಟಿ ಕೈಗೊಂಡಿದ್ದರು.

ADVERTISEMENT

ಆಕೆಯ ವಿಮಾನವು ರಾಜಧಾನಿ ತೈಪೆಯ ವಿಮಾನ ನಿಲ್ದಾಣದಿಂದ ಸುಮಾರು 6 ಗಂಟೆ(ಸ್ಥಳೀಯ ಕಾಲಮಾನ) ಸುಮಾರಿಗೆ ಹೊರಟಿದೆ.

ಇದಕ್ಕೂ ಮುನ್ನ, ತೈವಾನ್ ಅಧ್ಯಕ್ಷ ಸಾಯ್ ಇಂಗ್ ವೆನ್ ಜೊತೆ ನ್ಯಾನ್ಸಿ ಸಭೆ ನಡೆಸಿದರು. ಇದೇವೇಳೆ, ಅಮೆರಿಕ ಕಾಂಗ್ರೆಸ್ ಸದಸ್ಯರನ್ನು ಒಳಗೊಂಡ ನ್ಯಾನ್ಸಿ ನೇತೃತ್ವದ ನಿಯೋಗವು, ಪ್ರಜಾಪ್ರಭುತ್ವದ ಮೂಲಕ ಸ್ವತಂತ್ರ ಆಡಳಿತ ನಡೆಸುತ್ತಿರುವ ತೈವಾನ್ ಅನ್ನು ಒಂಟಿಯಾಗಿ ಬಿಡುವುದಿಲ್ಲ ಎಂಬ ಸಂದೇಶ ಸಾರಿತು.

‘ಇಂದು ಜಗದ ಮುಂದೆ ಪ್ರಜಾಪ್ರಭುತ್ವ ಮತ್ತು ನಿರಂಕುಶಪ್ರಭುತ್ವದ ಆಯ್ಕೆಗಳಿವೆ. ತೈವಾನ್ ಮತ್ತು ವಿಶ್ವದ ಎಲ್ಲ ಕಡೆ ಪ್ರಜಾಪ್ರಭುತ್ವವನ್ನು ರಕ್ಷಿಸಲು ಅಮೆರಿಕ ಬದ್ಧವಾಗಿದೆ’ ಎಂದು ನ್ಯಾನ್ಸಿ ಹೇಳಿದ್ದರು.

ತೈವಾನ್ ಅನ್ನು ತನ್ನದೇ ದೇಶದ ಭಾಗವೆಂದು ಪರಿಗಣಿಸುವ ಚೀನಾವು, ತೈವಾನ್ ಇತರೆ ದೇಶಗಳ ಜೊತೆಗೆ ಸಂಬಂಧ ವೃದ್ಧಿಗೆ ನಡೆಸುವ ಯಾವುದೇ ಪ್ರಯತ್ನವನ್ನು ವಿರೋಧಿಸುತ್ತದೆ. ಹೀಗಾಗಿ, ನ್ಯಾನ್ಸಿ, ತೈವಾನ್ ಭೇಟಿ ಬೆನ್ನಲ್ಲೇ ಜಲಸಂಧಿಯ ಸುತ್ತ ಚೀನಾ ಯುದ್ಧ ವಿಮಾನಗಳು ಹಾರಾಟ ನಡೆಸಿದ್ದವು ಮತ್ತು ತೈವಾನ್ ಜಲಪ್ರದೇಶಕ್ಕೆ ಪ್ರವೇಶಿಸಿದ್ದವು.

ಇದನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.