ADVERTISEMENT

ಲಾಕ್‌ಡೌನ್ ವಿರೋಧಿ ಪ್ರತಿಭಟನೆ ಹತ್ತಿಕ್ಕಲು ಚೀನಾದಲ್ಲಿ ಪೆಪ್ಪರ್‌ ಸ್ಪ್ರೇ ಬಳಕೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 20:18 IST
Last Updated 27 ನವೆಂಬರ್ 2022, 20:18 IST
   

ಬೀಜಿಂಗ್‌:ಚೀನಾದಲ್ಲಿ ನಡೆಯುತ್ತಿರುವ ಕೋವಿಡ್ ಲಾಕ್‌ಡೌನ್ ವಿರೋಧಿ ಪ್ರತಿಭಟನೆಗಳು ಭಾನುವಾರ ರಾಜಕೀಯ ಸ್ವರೂಪ ಪಡೆದವು.ಶಾಂಘೈನ ವುಲುಮುಖಿ ರಸ್ತೆಯಲ್ಲಿಶನಿವಾರ ರಾತ್ರಿಯಿಂದಲೇ ಭಾರಿ ಭದ್ರತೆ ಇದ್ದರೂ ಭಾನುವಾರ ಬೆಳಿಗ್ಗೆ ಸಾವಿರಾರು ಜನರು ಪ್ರತಿಭಟನೆಗೆ ಇಳಿದರು. ಉರುಮ್ಕಿ ರಸ್ತೆಯಲ್ಲಿ ಮಧ್ಯರಾತ್ರಿ ಸೇರಿದ್ದ ಸುಮಾರು 300 ಪ್ರತಿಭಟನಕಾರರ ಮೇಲೆ ಪೊಲೀಸರು ಪೆಪ್ಪರ್ ಸ್ಪ್ರೇ ಬಳಸಿದರು.

‌‘ಷಿ ಜಿನ್‌‍ಪಿಂಗ್‌ ಕೆಳಗಿಳಿಯಲಿ, ಸಿಪಿಸಿಅಧಿಕಾರದಿಂದತೊಲಗಲಿ’, ‘ನಮಗೆ ಪಿಸಿಆರ್‌ ಪರೀಕ್ಷೆ ಬೇಡ, ನಮಗೆ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯ ಬೇಕು’ ಎಂಬ ಘೋಷಣೆಗಳು ಮೊಳಗಿದವು.

ಸತತ ಮೂರನೇ ಬಾರಿಗೆ ಅಧ್ಯಕ್ಷರಾಗಿರುವ ಷಿ ಜಿನ್‌ಪಿಂಗ್‌ ಅವರಿಗೆ ದೇಶದಲ್ಲಿ ಉಲ್ಬಣಿಸುತ್ತಿರುವ ಕೋವಿಡ್‌, ಲಾಕ್‌ಡೌನ್‌ ವಿರೋಧಿ ಪ್ರತಿಭಟನೆ ಹಾಗೂ ಆರ್ಥಿಕ ಹಿಂಜರಿತ ನಿಭಾಯಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.