ADVERTISEMENT

ಕಂಪನಿಯ ಲಸಿಕೆಯಿಂದ ಮಕ್ಕಳಿಗೂ ಕೋವಿಡ್‌ನಿಂದ ರಕ್ಷಣೆ: ಫೈಜರ್‌

ಏಜೆನ್ಸೀಸ್
Published 31 ಮಾರ್ಚ್ 2021, 13:46 IST
Last Updated 31 ಮಾರ್ಚ್ 2021, 13:46 IST
ಲಸಿಕೆ
ಲಸಿಕೆ   

ವಾಷಿಂಗ್ಟನ್‌: ತಾನು ಅಭಿವೃದ್ಧಿಪಡಿಸಿರುವ ಕೋವಿಡ್‌–19 ಲಸಿಕೆ ಪಡೆಯುವ 12 ವರ್ಷ ವಯೋಮಾನದ ಮಕ್ಕಳಲ್ಲಿಯೂ ರೋಗ ನಿರೋಧಕ ಶಕ್ತಿ ಬೆಳೆದು, ಸೋಂಕಿನಿಂದ ಪರಿಣಾಮಕಾರಿ ರಕ್ಷಣೆ ಸಿಗಲಿದೆ ಎಂದು ಫೈಜರ್‌ ಕಂಪನಿ ಬುಧವಾರ ಹೇಳಿದೆ.

ಶಾಲೆಗಳನ್ನು ಪುನಃ ಆರಂಭಿಸಲು ಸಿದ್ಧತೆ ನಡೆದಿರುವ ಈ ಸಮಯದಲ್ಲಿ, ಫೈಜರ್‌ ಕಂಪನಿಯ ಹೇಳಿಕೆಯಿಂದ 12 ವರ್ಷ ವಯೋಮಾನದವರಿಗೂ ಕೋವಿಡ್‌ ಲಸಿಕೆ ನೀಡಲು ಸಾಧ್ಯವಾಗಲಿದೆ.

ಫೈಜರ್‌ ಕಂಪನಿಯು 16 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ಲಸಿಕೆ ನೀಡಲು ಈಗಾಗಲೇ ಅನುಮೋದನೆ ನೀಡಿದೆ.

12ರಿಂದ 15 ವರ್ಷದ ವಯೋಮಾನದವರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಲಸಿಕೆಯ ನಿಗದಿತ ಡೋಸ್‌ಗಳನ್ನು ನೀಡಲಾಗಿದ್ದ ಈ ಗುಂಪಿನ ಅಭ್ಯರ್ಥಿಗಳಲ್ಲಿ ಕೋವಿಡ್‌–19 ಕಂಡು ಬಂದಿರಲಿಲ್ಲ ಎಂದು ಕಂಪನಿ ಹೇಳಿದೆ.

ಪ್ರಸ್ತುತ ವಿಶ್ವದ ವಿವಿಧೆಡೆ ಲಭ್ಯವಿರುವ ಲಸಿಕೆಗಳನ್ನು ವಯಸ್ಕರಿಗೆ ಮಾತ್ರ ನೀಡಲಾಗುತ್ತಿದೆ. ಅದರಲ್ಲೂ, ಕೊರೊನಾ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚಿರುವ ವ್ಯಕ್ತಿಗಳಿಗೆ ಆದ್ಯತೆ ಮೇಲೆ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.