ADVERTISEMENT

127 ವರ್ಷದ ನಂತರ ಬಿಯರ್ ಉತ್ಪಾದನೆ ನಿಲ್ಲಿಸಿದ ಆ್ಯಂಕರ್ ಬ್ರೀವಿಂಗ್ ಕಂಪನಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2023, 15:27 IST
Last Updated 13 ಜುಲೈ 2023, 15:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸ್ಯಾನ್‌ ಫ್ರಾನ್ಸಿಸ್ಕೊ: ಅಮೆರಿಕದ, ಸ್ಯಾನ್‌ಫ್ರಾನ್ಸಿಸ್ಕೊದಲ್ಲಿರುವ ಆ್ಯಂಕರ್ ಬ್ರೀವಿಂಗ್‌ ಕಂಪನಿ 127 ವರ್ಷದ ನಂತರ ಬಿಯರ್‌ ಉತ್ಪಾದನೆಯನ್ನು ನಿಲ್ಲಿಸಿದೆ. ಬಿಯರ್‌ನ ಮಾರಾಟವು ಕುಸಿದು ಉಂಟಾದ ಆರ್ಥಿಕ ಸಂಕಷ್ಟವು ಬೀಗಮುದ್ರೆಗೆ ಕಾರಣ ಎಂದು ತಿಳಿಸಿದೆ.

ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಆ್ಯಂಕರ್ ಸಂಸ್ಥೆಯು 1896ರಲ್ಲಿ ಸ್ಥಾಪನೆಗೊಂಡಿತ್ತು. ಆ್ಯಂಕರ್ ಬ್ರೀವಿಂಗ್‌ ಪ್ರಕಾರ, ನಷ್ಟದಲ್ಲಿದ್ದ ಸಂಸ್ಥೆಯೊಂದನ್ನು 1960ರಲ್ಲಿ ಸ್ಟ್ಯಾನ್‌ಫೋರ್ಡ್ ಗ್ರಾಡ್‌ ಫ್ರಿಟ್ಜ್ ಮೇಟ್ಯಾಗ್ ಅನ್ನು ಸ್ವಾಧೀನ ಪಡೆದಿತ್ತು.

ಕಳೆದ ವರ್ಷ ಕಂಪನಿಯ ಬಿಯರ್‌ನ ಒಟ್ಟು ಮಾರಾಟ ವಹಿವಾಟು ಶೆ 3.1ರಷ್ಟು ಕಡಿಮೆ ಆಗಿತ್ತು. ಈಗ ಸಿಬ್ಬಂದಿಗೆ 60 ದಿನ ನೋಟಿಸ್‌ ನೀಡಿರುವ ಕಂಪನಿಯು ಬೀಗಮುದ್ರೆಗೆ ಮುಂದಾಗಿದೆ.

ADVERTISEMENT

ಬಿಯರ್‌ನ ಸ್ವಾದ ಹೆಚ್ಚಿಸಲು ಒತ್ತು ನೀಡಿದ್ದು, ಉತ್ಪನ್ನಗಳು ಹೆಚ್ಚಿನ ಅಮೆರಿಕನ್ನರ ಮೆಚ್ಚುಗೆ ಗಳಿಸಿದ್ದವು. ಬಿಯರ್ ಅನ್ನು ಬಾಟಲಿಗಳಲ್ಲಿ ಮಾರುವ ಕ್ರಮವನ್ನು 1971ರಲ್ಲಿ ಜಾರಿಗೊಳಿಸಿತ್ತು. 1970ರ ಮಧ್ಯಭಾಗದ ವೇಳೆಗೆ ಕಂಪನಿ ಆರ್ಥಿಕವಾಗಿ ಸುಸ್ಥಿರವಾಗಿತ್ತು.

ಕಂಪನಿಯ ‘ಆ್ಯಂಕರ್ ಪೋರ್ಟರ್, ಲಿಬರ್ಟಿ ಅಲೆ, ಓಲ್ಡ್‌ ಫಾಗ್ಹಾರ್ನ್ ಬಾರ್ಲೆವೈನ್‌ ಅಲೆ, ಕ್ರಿಸ್‌ಮಸ್‌ ಅಲೆ’ ಉತ್ಪನ್ನಗಳು ಪಾನೀಯ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದ್ದವು. 2017ರಲ್ಲಿ ಈ ಕಂಪನಿಯನ್ನು ಜಪಾನ್‌ನ ಸಪ್ಪೊರೊ ಖರೀದಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.