ಪ್ಯಾರಿಸ್: ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರಿಗೆ ಸಂಗೀತ ವಾದ್ಯ ಸಿತಾರ್ ನ ಶ್ರೀಗಂಧದ ಪ್ರತಿಕೃತಿ ಹಾಗೂ ಅವರ ಪತ್ನಿ ಬ್ರಿಗಿಟಿ ಮ್ಯಾಕ್ರನ್ ಗೆ ಪೊಚಂಪಲ್ಲಿ ಸಿಲ್ಕ್ ಇಕ್ಕತ್ ಸೀರೆಯನ್ನು ಶ್ರೀಗಂಧದ ಪೆಟ್ಟಿಗೆಯಲ್ಲಿಟ್ಟು ಉಡುಗೊರೆಯಾಗಿ ನೀಡಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಈ ಅಲಂಕಾರಿಕ ಪ್ರತಿಕೃತಿಯು ಕಲಿಕೆಯ ದೇವತೆ ಎಂದು ಪರಿಗಣಿಸಲಾದ ಸರಸ್ವತಿ ಚಿತ್ರ ಹಾಗೂ ಗಣೇಶನ ಚಿತ್ರವನ್ನು ಹೊಂದಿದೆ. ಸಂಗೀತ ವಾದ್ಯದ ವಿಶಿಷ್ಟ ಪ್ರತಿಕೃತಿಯನ್ನು ಶುದ್ಧ ಶ್ರೀಗಂಧದಿಂದ ತಯಾರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶ್ರೀಗಂಧದ ಕೆತ್ತನೆಯು ದಕ್ಷಿಣ ಭಾರತದಲ್ಲಿ ಶತಮಾನಗಳಿಂದ ಅಭ್ಯಾಸ ಮಾಡುತ್ತಿರುವ ಸೊಗಸಾದ ಮತ್ತು ಪ್ರಾಚೀನ ಕರಕುಶಲ ಕಲೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.