ADVERTISEMENT

ಫ್ರಾನ್ಸ್‌ನಲ್ಲಿ ಭಾರತೀಯ ರಾಯಭಾರ ಕಚೇರಿ ಉದ್ಘಾಟಿಸಿದ ಮೋದಿ, ಮ್ಯಾಕ್ರನ್‌

ಪಿಟಿಐ
Published 12 ಫೆಬ್ರುವರಿ 2025, 10:19 IST
Last Updated 12 ಫೆಬ್ರುವರಿ 2025, 10:19 IST
<div class="paragraphs"><p>ಫ್ರಾನ್ಸ್‌ನಲ್ಲಿ ನೂತನ ಭಾರತೀಯ ರಾಯಭಾರ ಕಚೇರಿ ಉದ್ಘಾಟಿಸಿದ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಮ್ಯಾಕ್ರನ್‌</p></div>

ಫ್ರಾನ್ಸ್‌ನಲ್ಲಿ ನೂತನ ಭಾರತೀಯ ರಾಯಭಾರ ಕಚೇರಿ ಉದ್ಘಾಟಿಸಿದ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಮ್ಯಾಕ್ರನ್‌

   

ರಾಯಿಟರ್ಸ್‌ ಚಿತ್ರ

ಪ್ಯಾರಿಸ್‌: ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್‌ ಜಂಟಿಯಾಗಿ ಬುಧವಾರ ಫ್ರಾನ್ಸ್‌ನ ಮಾರ್ಸೈಲ್‌ ನಗರದಲ್ಲಿ ನೂತನ ಭಾರತೀಯ ರಾಯಭಾರ ಕಚೇರಿಯನ್ನು ಉದ್ಘಾಟಿಸಿದರು. 

ADVERTISEMENT

ಈ ವೇಳೆ ನೆರೆದಿದ್ದ ಜನ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಭಾರತ ಮತ್ತು ಫ್ರಾನ್ಸ್‌ ಧ್ವಜವನ್ನು ಹಿಡಿದಿದ್ದರು. ಇನ್ನು ಕೆಲವರು ಭಾರತದ ಧ್ವಜದ ಬಣ್ಣವನ್ನು ಹಚ್ಚಿಕೊಂಡು ಬಂದಿದ್ದರು.

ಇದಕ್ಕೂ ಮುನ್ನ ಮೋದಿ ಮತ್ತು ಮ್ಯಾಕ್ರನ್‌ ಯುದ್ಧದಲ್ಲಿ ಮಡಿದ  ಭಾರತೀಯ ಯೋಧರ ಸಮಾಧಿ ಇರುವ ಮಜಾರ್ಗಸ್ ಪ್ರದೇಶಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು. ಬಳಿಕ ಅಲ್ಲಿ ನೆರೆದಿದ್ದ ಜನರೊಂದಿಗೆ ಮಾತುಕತೆ ನಡೆಸಿದ್ದರು.

ಅಧ್ಯಕ್ಷ ಮ್ಯಾಕ್ರನ್‌ ಅವರ ಆಹ್ವಾನದ ಮೇರೆಗೆ ಫ್ರಾನ್ಸ್‌ಗೆ ತೆರಳಿರುವ ಪ್ರಧಾನಿ ಮೋದಿ ಮಂಗಳವಾರ ಎಐ ಆ್ಯಕ್ಷನ್‌ ಶೃಂಗದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.