ADVERTISEMENT

PM Modi Saudi Arabia Visit: ಸೌದಿ ಅರೇಬಿಯಾಗೆ ಪ್ರಧಾನಿ ಮೋದಿ ಭೇಟಿ

ಉಭಯ ರಾಷ್ಟ್ರಗಳ ಬಾಂಧವ್ಯ ವೃದ್ಧಿಗೆ ಬಲ

ಪಿಟಿಐ
Published 22 ಏಪ್ರಿಲ್ 2025, 10:56 IST
Last Updated 22 ಏಪ್ರಿಲ್ 2025, 10:56 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

(ಚಿತ್ರ ಕೃಪೆ: X/@narendramodi)

ಜೆಡ್ಡಾ: ಸೌದಿ ಅರೇಬಿಯಾಗೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಐತಿಹಾಸಿಕ ಬಂದರು ನಗರಿ ಜೆಡ್ಡಾಗೆ ಮಂಗಳವಾರ ಭೇಟಿ ನೀಡಿದರು. ಸೌದಿ ರಾಜಕುಮಾರ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅವರ ಆಹ್ವಾನದ ಮೇರೆಗೆ ಪ್ರಧಾನಿ ಇಲ್ಲಿಗೆ ಬಂದಿದ್ದಾರೆ. 

ADVERTISEMENT

ಅಬ್ದುಲ್‌ ಅಜೀಜ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಆಗಮಿಸುತ್ತಿದ್ದಂತೆಯೇ ಮೆಕ್ಕಾ ಪ್ರಾಂತ್ಯದ ಉಪ ಗವರ್ನರ್ ಸೌದ್‌ ಬಿನ್‌ ಮಿಶಾಲ್‌ ಬಿನ್‌ ಅಬ್ದುಲ್‌ ಅಜೀಜ್ ಹಾಗೂ ವಾಣಿಜ್ಯ ಸಚಿವ ಡಾ.ಮಜೀದ್‌ ಅಲ್‌ ಕಸ್ಸಾಬಿ ಅವರು ಸರ್ಕಾರಿ ಗೌರವದೊಂದಿಗೆ ಮೋದಿ ಅವರನ್ನು ಸ್ವಾಗತಿಸಿದರು. 

ಭೇಟಿಗೆ ಸಂಬಂಧಿಸಿದಂತೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಪ್ರಧಾನಿ, ‘ಜೆಡ್ಡಾಗೆ ಬಂದು ಇಳಿದಿದ್ದೇನೆ. ಭಾರತ ಮತ್ತು ಸೌದಿ ನಡುವಿನ ಬಾಂಧವ್ಯವನ್ನು ಈ ಭೇಟಿ ಮತ್ತಷ್ಟು ವೃದ್ಧಿಸಲಿದೆ. ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಕಾತುರನಾಗಿದ್ದೇನೆ’ ಎಂದಿದ್ದಾರೆ. ಜತೆಗೆ ಸೌದಿ ರಾಜಕುಮಾರನನ್ನು ’ನನ್ನ ಸಹೋದರ’ ಎಂದೂ ಬಣ್ಣಿಸಿದ್ದಾರೆ.

6 ಒಪ್ಪಂದಗಳಿಗೆ ಸಹಿ: ಬಾಹ್ಯಾಕಾಶ, ಇಂಧನ, ಆರೋಗ್ಯ, ಸಂಸ್ಕೃತಿ, ವಿಜ್ಞಾನ, ವೈಜ್ಞಾನಿಕ ಸಂಶೋಧನೆ ಕ್ಷೇತ್ರಗಳಿಗೆ ಸಂಬಂಧಿಸಿದ ಒಪ್ಪಂದಗಳಿಗೆ ಮೋದಿ ಮತ್ತು ಸೌದಿ ದೊರೆ ಸಹಿ ಹಾಕಲಿದ್ದಾರೆ. ವ್ಯಾಪಾರ, ಹೂಡಿಕೆ, ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಒಪ್ಪಂದಗಳ ಮಾತುಕತೆ ಪ್ರಗತಿಯಲ್ಲಿದ್ದು, ಒಟ್ಟು 12 ಒಪ್ಪಂದಗಳನ್ನು ಮಾಡಿಕೊಳ್ಳುವ ನಿರೀಕ್ಷೆ ಇದೆ. ಇದಲ್ಲದೇ, ಹಜ್‌ ಯಾತ್ರೆ, ಭಾರತೀಯ ಯಾತ್ರಾರ್ಥಿಗಳಿಗೆ ಒದಗಿಸುವ ಕೋಟಾದ ಬಗ್ಗೆಯೂ ಸೌದಿ ದೊರೆಯ ಜತೆಗೆ ಮೋದಿ ಮಾತನಾಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.