
ತಾರಿಕ್ ರೆಹಮಾನ್ ಹಾಗೂ ನರೇಂದ್ರ ಮೋದಿ
ಚಿತ್ರಕೃಪೆ: X ಹಾಗೂ ಪಿಟಿಐ
ನವದೆಹಲಿ: ಬಾಂಗ್ಲಾದೇಶ ನೂತನ ಪ್ರಧಾನಿ ತಾರಿಕ್ ರೆಹಮಾನ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಜರಾಗುತ್ತಿಲ್ಲ ಎಂದು ವಿದೇಶಾಂಗ ಸಚಿವಾಲಯ ಭಾನುವಾರ ಖಚಿತಪಡಿಸಿದೆ.
ತಾರಿಕ್ ಅವರು ಢಾಕಾದಲ್ಲಿರುವ ರಾಷ್ಟ್ರೀಯ ಸಂಸತ್ ಭವನದ ದಕ್ಷಿಣ ಪ್ಲಾಜಾದಲ್ಲಿ ಫೆಬ್ರುವರಿ 17ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಮಾರಂಭದಲ್ಲಿ ಭಾವಹಿಸುವಂತೆ ಮೋದಿ ಅವರಿಗೆ ಆಹ್ವಾನ ನೀಡಲಾಗಿತ್ತು.
ಮೋದಿ ಅವರ ಬದಲು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
'ಸಮಾರಂಭದಲ್ಲಿ ಬಿರ್ಲಾ ಅವರು ಭಾಗವಹಿಸುತ್ತಿರುವುದು ಉಭಯ ದೇಶಗಳ ನಡುವಣ ಆಳವಾದ ಹಾಗೂ ಶಾಶ್ವತ ಸ್ನೇಹವನ್ನು ಒತ್ತಿ ಹೇಳುತ್ತದೆ. ಎರಡೂ ದೇಶಗಳನ್ನು ಬೆಸೆದಿರುವ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಭಾರತ, ಬಾಂಗ್ಲಾ ಬದ್ಧವಾಗಿವೆ' ಎಂದು ಪ್ರತಿಪಾದಿಸಿದೆ.
ಬಾಂಗ್ಲಾದೇಶ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದಿನ್ ಅವರು, ತಾರಿಕ್ ನೇತೃತ್ವದ ನೂತನ ಸಚಿವ ಸಂಪುಟಕ್ಕೆ ಪ್ರಮಾಣವಚನ ಬೋಧಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.