ADVERTISEMENT

ಧರ್ಮನಿಂದನೆ ಆರೋಪ ಕೈಬಿಡಿ: ಪಾಕಿಸ್ತಾನಕ್ಕೆ ಅಮೆರಿಕ ಆಗ್ರಹ

ಪಿಟಿಐ
Published 22 ಜೂನ್ 2019, 19:46 IST
Last Updated 22 ಜೂನ್ 2019, 19:46 IST
ಪಾಂಪಿಯೊ
ಪಾಂಪಿಯೊ   

ವಾಷಿಂಗ್ಟನ್‌: ಧರ್ಮನಿಂದನೆ ಆರೋಪ ಎದುರಿಸುತ್ತಿರುವ 40ಕ್ಕೂ ಹೆಚ್ಚು ಧಾರ್ಮಿಕ ಆಲ್ಪಸಂಖ್ಯಾತರನ್ನು ಬಿಡುಗಡೆ ಮಾಡುವಂತೆ ಪಾಕಿಸ್ತಾನವನ್ನು ಅಮೆರಿಕ ಆಗ್ರಹಿಸಿದೆ.

ವಿವಿಧ ಧರ್ಮಗಳ ಸ್ವಾತಂತ್ರ್ಯದ ಕುರಿತು ಕಾಳಜಿ ವಹಿಸಲು ರಾಯಭಾರಿಯನ್ನು ನೇಮಿಸುವಂತೆಯೂ ಅಮೆರಿಕ ಇದೇ ವೇಳೆ ಪಾಕ್‌ಗೆ ತಿಳಿಸಿದೆ.

ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ವಾರ್ಷಿಕ ವರದಿಯನ್ನು (2018) ಬಿಡುಗಡೆ ಮಾಡಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಮಾಹಿತಿ ನೀಡಿದರು. ವರದಿ ಪ್ರಕಾರ ಪಾಕ್‌ನಲ್ಲಿ ಸುಮಾರು 77 ಜನರು ಧರ್ಮನಿಂದನೆ ಪ್ರಕರಣ ಎದುರಿಸುತ್ತಿದ್ದಾರೆ. ಅವರಲ್ಲಿ 28 ಜನರು ಮರಣದಂಡನೆ ಶಿಕ್ಷೆ ಎದುರಿಸುತ್ತಿದ್ದಾರೆ.

ADVERTISEMENT

ಅಲ್ಪಸಂಖ್ಯಾತರ ಮೇಲೆ ಭಾರತದಲ್ಲಿ ಹಲ್ಲೆ: ವರದಿ
ವಾಷಿಂಗ್ಟನ್‌ (ಪಿಟಿಐ): ಗೋವುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆ, ಕೊಲ್ಲುತ್ತಿದ್ದಾರೆ ಎನ್ನುವ ವದಂತಿಗಳಿಂದಾಗಿ ಭಾರತದಲ್ಲಿಅಲ್ಪಸಂಖ್ಯಾತರ ಮೇಲೆ, ಅದರಲ್ಲೂಮುಸ್ಲಿಂ ಸಮುದಾಯದ ಮೇಲೆಹಿಂದೂ ತೀವ್ರವಾದಿ ಸಂಘಟನೆಗಳ ಗುಂಪುದಾಳಿ 2018ರಲ್ಲೂ ಮುಂದುವರಿದಿತ್ತು ಎಂದು ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.