ADVERTISEMENT

ಚೀನಾದ ಅಮೆರಿಕ ರಾಯಭಾರಿ ಟೆರಿ ಬ್ರಾನ್‌ಸ್ಟಾಡ್ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2020, 10:10 IST
Last Updated 14 ಸೆಪ್ಟೆಂಬರ್ 2020, 10:10 IST
ಟೆರಿ ಬ್ರಾನ್‌ಸ್ಟಾಡ್
ಟೆರಿ ಬ್ರಾನ್‌ಸ್ಟಾಡ್   

ಬಿಜೀಂಗ್‌/ ವಾಷಿಂಗ್ಟನ್‌: ಚೀನಾದಲ್ಲಿನ ಅಮೆರಿಕ ರಾಯಭಾರಿ ಟೆರಿ ಬ್ರಾನ್‌ಸ್ಟಾಡ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

‘ನಿಮ್ಮ ಮೂರು ವರ್ಷಗಳ ಸೇವೆಗೆ ಧನ್ಯವಾದಗಳು. ಅಮೆರಿಕ ಮತ್ತು ಚೀನಾ ಸಂಬಂಧಗಳನ್ನು ಸಮತೋಲನವಾಗಿ ಕಾಪಾಡುವಲ್ಲಿ ಶ್ರಮಿಸಿದ್ದೀರಿ’ ಎಂದುಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಟ್ವೀಟ್‌ ಮಾಡಿದ್ದಾರೆ.

ಅಮೆರಿಕ ಮತ್ತು ಚೀನಾ ನಡುವಿನ ಸಂಬಂಧವನ್ನು ಸಮತೋಲನಗೊಳಿಸುವಲ್ಲಿರಾಯಭಾರಿ ಬ್ರಾನ್‌ಸ್ಟಾಡ್ ಅವರು ಮಹತ್ವದ ಪಾತ್ರ ವಹಿಸಿದ್ದರು. ಅವರು ನ್ಯಾಯಯುತವಾಗಿ ಕೆಲಸ ಮಾಡಿದ್ದಾರೆ ಎಂದು ಪೊಂಪಿಯೊ ಟ್ವಿಟರ್‌ನಲ್ಲಿ ಹೇಳಿದರು.

ADVERTISEMENT

2017ರ ಮೇ ತಿಂಗಳಿಂದ ಬ್ರಾನ್‌ಸ್ಟಾಡ್‌ ಈ ಹುದ್ದೆಯಲ್ಲಿದ್ದರು. ಬ್ರಾನ್‌ಸ್ಟಾಡ್‌ ಅವರ ರಾಜೀನಾಮೆಗೆ ಖಚಿತ ಕಾರಣಗಳು ತಿಳಿದು ಬಂದಿಲ್ಲ.

ಚೀನಾದ ಸರ್ಕಾರಿ ಸ್ವಾಮ್ಯದ ‘ಪೀಪಲ್ಸ್‌ ಡೈಲಿ’ ದಿನಪತ್ರಿಕೆ ಬ್ರಾನ್‌ಸ್ಟಾಡ್ ಅವರ ಅಂಕಣವನ್ನು ಪ್ರಕಟಿಸಲು ತಿರಸ್ಕರಿಸಿತ್ತು. ಇದು ವಿವಾದದ ಸ್ವರೂಪ ಪಡೆದ ಬೆನ್ನಲ್ಲೇಬ್ರಾನ್‌ಸ್ಟಾಡ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.