ರೋಮ್: ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಲಸಿಗರ ಸಾಮೂಹಿಕ ಗಡೀಪಾರಿಗೆ ಯೋಜನೆ ರೂಪಿಸಿರುವುದು ‘ನಾಚಿಕೆಗೇಡು’ ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ.
'ವಲಸಿಗರನ್ನು ಗಡೀಪಾರು ಮಾಡಬೇಡಿ. ಇದು ಸಮಸ್ಯೆಗೆ ಪರಿಹಾರ ಅಲ್ಲ' ಎಂದು ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
‘ಎಲ್ಲರನ್ನೂ ಸ್ವಾಗತಿಸುವ, ಅವಕಾಶಗಳನ್ನು ಒದಗಿಸುವ ಅಮೆರಿಕದ ಸಿದ್ಧಾಂತವು ಹಾಗೆಯೇ ಉಳಿಯಲಿ’ ಎಂದು ಪ್ರಾರ್ಥಿಸುತ್ತೇನೆ ಅವರು ಹೇಳಿದರು.
‘ಟ್ರಂಪ್ ಅವರ ನಾಯಕತ್ವದಲ್ಲಿ ಅಮೆರಿಕದ ಜನರು ಸಮೃದ್ಧಿ ಮತ್ತು ನ್ಯಾಯಯುತ ಸಮಾಜಕ್ಕಾಗಿ ಹಾಗೂ ದ್ವೇಷ, ತಾರತಮ್ಯಕ್ಕೆ ಆಸ್ಪದ ಇರದ ನಾಡನ್ನು ದೇಶ ಕಟ್ಟಲು ಉತ್ಸಾದಿಂದ ಕೆಲಸ ಮಾಡಿದ್ದಾರೆ ಎಂದು ಭಾವಿಸುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.