ADVERTISEMENT

ಬ್ರಿಟನ್ ರಾಣಿ 2ನೇ ಎಲಿಜಬೆತ್ ಅಂತ್ಯಸಂಸ್ಕಾರ; ಲಂಡನ್‌ಗೆ ಆಗಮಿಸಿದ ದ್ರೌಪದಿ ಮುರ್ಮ

ಪಿಟಿಐ
Published 18 ಸೆಪ್ಟೆಂಬರ್ 2022, 2:44 IST
Last Updated 18 ಸೆಪ್ಟೆಂಬರ್ 2022, 2:44 IST
ಲಂಡನ್‌ಗೆ ಆಗಮಿಸಿದ ದ್ರೌಪದಿ ಮುರ್ಮು (ಚಿತ್ರಕೃಪೆ: @rashtrapatibhvn)
ಲಂಡನ್‌ಗೆ ಆಗಮಿಸಿದ ದ್ರೌಪದಿ ಮುರ್ಮು (ಚಿತ್ರಕೃಪೆ: @rashtrapatibhvn)   

ಲಂಡನ್:ಬ್ರಿಟನ್‌ನ ಸುದೀರ್ಘ ಕಾಲದ ರಾಣಿ ಎನಿಸಿದ್ದ 2ನೇ ಎಲಿಜಬೆತ್‌ ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಸಂಜೆ ಲಂಡನ್‌ಗೆ ಆಗಮಿಸಿದ್ದಾರೆ.

96 ವರ್ಷ ವರ್ಷದ ರಾಣಿ ಎಲಿಜಬೆತ್‌ ಅವರು,ಸೆಪ್ಟೆಂಬರ್ 8 ರಂದು ಸ್ಕಾಟ್ಲೆಂಡ್‌ನ ಬಾಲ್ಮೋರಲ್ ಕ್ಯಾಸಲ್‌ನ ಬೇಸಿಗೆ ನಿವಾಸದಲ್ಲಿ ನಿಧನರಾಗಿದ್ದರು. ನಾಳೆ (ಸೆಪ್ಟೆಂಬರ್ 19) ಬೆಳಿಗ್ಗೆ ವೆಸ್ಟ್‌ಮಿನ್‌ಸ್ಟರ್‌ ಅಬ್ಬೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ನವದೆಹಲಿಯಿಂದಮುರ್ಮು ಅವರ ವಿಮಾನ ಪ್ರಯಾಣ ಆರಂಭವಾಗುತ್ತಿದ್ದಂತೆಯೇ ಶನಿವಾರ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದರಾಷ್ಟ್ರಪತಿ ಭವನ,ಎರಡನೇ ಎಲಿಜಬೆತ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಹಾಗೂಭಾರತ ಸರ್ಕಾರದ ಪರವಾಗಿ ಸಂತಾಪ ಸೂಚಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಲಂಡನ್‌ಗೆ ತೆರಳಿದ್ದಾರೆ ಎಂದು ತಿಳಿಸಿತ್ತು.

ADVERTISEMENT

ಭಾರತ ಸರ್ಕಾರಸೆಪ್ಟೆಂಬರ್‌ 11ರಂದು ದೇಶದಾದ್ಯಂತ ಶೋಕಾಚರಣೆ ಘೋಷಿಸಿತ್ತು. ಮರುದಿನ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ನವದೆಹಲಿಯಲ್ಲಿರುವ ಬ್ರಿಟಿಷ್‌ ಹೈಕಮಿಷನ್‌ಗೆ ತೆರಳಿ ಸರ್ಕಾರದ ಪರವಾಗಿ ಸಂತಾಪ ಸೂಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.