ADVERTISEMENT

ಆತನಿಗೆ ಸಂಪೂರ್ಣ ಹುಚ್ಚು ಹಿಡಿದಿದೆ: ಪುಟಿನ್‌ ವಿರುದ್ಧ ಟ್ರಂಪ್ ವಾಗ್ದಾಳಿ

ಪಿಟಿಐ
Published 26 ಮೇ 2025, 3:52 IST
Last Updated 26 ಮೇ 2025, 3:52 IST
<div class="paragraphs"><p>ಪುಟಿನ್ ಮತ್ತು ಡೊನಾಲ್ಡ್‌ ಟ್ರಂಪ್</p></div>

ಪುಟಿನ್ ಮತ್ತು ಡೊನಾಲ್ಡ್‌ ಟ್ರಂಪ್

   

ವಾಷಿಂಗ್ಟನ್‌: ಉಕ್ರೇನ್‌ ಮೇಲೆ ಡ್ರೋನ್‌ ಮತ್ತು ಕ್ಷಿಪಣಿ ದಾಳಿ ಮುಂದುವರಿಸಿರುವ ರಷ್ಯಾದ ನಡೆಯನ್ನು ಟೀಕಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಆತನಿಗೆ(ಪುಟಿನ್‌) ಸಂಪೂರ್ಣ ಹುಚ್ಚು ಹಿಡಿದಿದೆ ಎಂದು ಕಿಡಿಕಾರಿದ್ದಾರೆ.

‘ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಅವರೊಂದಿಗೆ ನಾನು ಉತ್ತಮ ಸಂಬಂಧವನ್ನು ಹೊಂದಿದ್ದೆ. ಆದರೆ, ಅವರಿಗೆ ಏನೋ ಆಗಿದೆ. ಆತ ಸಂಪೂರ್ಣವಾಗಿ ಹುಚ್ಚನಾಗಿದ್ದಾನೆ’ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಟ್ರಂಪ್‌ ಹೇಳಿದ್ದಾರೆ.

ADVERTISEMENT

‘ಯಾವುದೇ ಕಾರಣವಿಲ್ಲದೆ ಉಕ್ರೇನ್‌ನ ನಗರಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಹಾರಿಸಲಾಗುತ್ತಿದೆ. ಇದರಿಂದ ಸಾವಿರಾರು ಅಮಾಯಕ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ

ಇಡೀ ಉಕ್ರೇನ್‌ ವಶಪಡಿಸಿಕೊಳ್ಳಲು ಪುಟಿನ್‌ ಬಯಸಿದರೆ ಅದು ರಷ್ಯಾದ ಪತನಕ್ಕೆ ಕಾರಣವಾಗಲಿದೆ ಎಂದೂ ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್‌ಸ್ಕಿ ವಿರುದ್ಧವೂ ಹರಿಹಾಯ್ದಿರುವ ಟ್ರಂಪ್‌, ಅವರ(ಝೆಲೆನ್ಸ್‌ಸ್ಕಿ) ಬಾಯಿಂದ ಹೊರಬರುವ ಎಲ್ಲ ಮಾತುಗಳು ಸಮಸ್ಯೆಗಳನ್ನು ಉಂಟುಮಾಡುತ್ತಿದೆ. ಅದು ನನಗೆ ಇಷ್ಟವಿಲ್ಲ. ಅದನ್ನು ನಿಲ್ಲಿಸುವುದು ಉತ್ತಮ’ ಎಂದು ಹೇಳಿದ್ದಾರೆ.

ಅಧ್ಯಕ್ಷ ಹುದ್ದೆಗೇರುವ ಮುನ್ನ ಚುನಾವಣಾ ಪ್ರಚಾರದಲ್ಲಿ ಉಕ್ರೇನ್‌–ರಷ್ಯಾ ಯುದ್ಧ ನಿಲ್ಲಿಸುವುದಾಗಿ ಟ್ರಂಪ್‌ ಭರವಸೆ ನೀಡಿದ್ದರು. ಇಲ್ಲಿಯವರೆಗೆ ಉಭಯ ದೇಶಗಳ ನಡುವೆ ಶಾಂತಿ ಮಾತುಕತೆಗೆ ನಡೆಸಿದ ಎಲ್ಲ ಪ್ರಯತ್ನಗಳು ವಿಫಲವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.