ADVERTISEMENT

ಚೀನಾದಲ್ಲಿ ಬಡತನ ನಿರ್ಮೂಲನೆ ಸಂಪೂರ್ಣ: ಷಿ ಜಿನ್‌ಪಿಂಗ್‌

ಪಿಟಿಐ
Published 25 ಫೆಬ್ರುವರಿ 2021, 7:16 IST
Last Updated 25 ಫೆಬ್ರುವರಿ 2021, 7:16 IST
ಷಿ ಜಿನ್‌ಪಿಂಗ್‌
ಷಿ ಜಿನ್‌ಪಿಂಗ್‌   

ಬಿಜೀಂಗ್‌: ‘ಕಳೆದ 40 ವರ್ಷಗಳಲ್ಲಿ 77 ಕೋಟಿ ಜನರನ್ನು ಬಡತನದಿಂದ ಹೊರತರುವ ಮೂಲಕ ಬಡತನ ನಿರ್ಮೂಲನೆಯಲ್ಲಿ ಚೀನಾ ಸಂಪೂರ್ಣ ಗೆಲುವು ಸಾಧಿಸಿದೆ’ ಎಂದು ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಗುರುವಾರ ತಿಳಿಸಿದ್ದಾರೆ.

ಈ ಸಾಧನೆ ಇತಿಹಾಸದಲ್ಲಿ ದಾಖಲಾಗಲಿದೆ ಎಂದೂ ಹೇಳಿದ್ದಾರೆ. ಬಡತನ ನಿರ್ಮೂಲನೆ ಕುರಿತಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರದಿಂದ ಬಡತನವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿದ್ದ ಬಡವರನ್ನು ಬಡತನದಿಂದ ಮೇಲೆತ್ತಲಾಗಿದೆ. 10 ವರ್ಷಗಳೊಳಗೆ ಬಡತನ ನಿರ್ಮೂಲನೆ ಎಂಬ ವಿಶ್ವಸಂಸ್ಥೆಯ ಗುರಿಯನ್ನು ಚೀನಾ 2030ರ ಗಡುವಿನೊಳಗೇ ಸಾಧಿಸಿದೆ ಎಂದಿದ್ದಾರೆ.

ಚೀನಾವು ಒಟ್ಟು 140 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ಕಳೆದ 8 ವರ್ಷಗಳಲ್ಲಿ ಬಡತನ ರೇಖೆಗಿಂತ ಕೆಳಗಿದ್ದ 9.89 ಕೋಟಿ ಜನರನ್ನು ಬಡತನದಿಂದ ಮುಕ್ತಗೊಳಿಸಲಾಗಿದೆ. 832 ಸಣ್ಣ ಗ್ರಾಮಗಳು ಮತ್ತು 12,8,000 ಗ್ರಾಮಗಳನ್ನು ಬಡತನ ರೇಖೆಯಿಂದ ಮೇಲೆತ್ತಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.