ಲಂಡನ್: ರಾಜಮನೆತನದ ಬಿಕ್ಕಟ್ಟು ಬಹಿರಂಗವಾದ ಬಳಿಕ ಮೊದಲ ಬಾರಿಗೆ ಬ್ರಿಟನ್ ರಾಜರಾದ ವಿಲಿಯಂ ಮತ್ತು ಹ್ಯಾರಿ ಇದೇ ಪ್ರಥಮ ಬಾರಿಗೆ ಜಂಟಿ ಹೇಳಿಕೆ ನೀಡಿದ್ದು, ಈ ಕುರಿತು ಮಾಧ್ಯಮ ವರದಿಗಳನ್ನು ಅಲ್ಲಗಳೆದಿದ್ದಾರೆ.
ರಾಜಮನೆತನದ ಮುಂಚೂಣಿ ಸಾಲಿನಿಂದ ಹಿಂದೆ ಸರಿಯುವ ಹ್ಯಾರಿ ಮತ್ತು ಮೇಘನ್ ಮಾರ್ಕ್ಲೆ ನಿಲುವಿಗೆ ಹಿರಿಯ ಸಹೋದರನ ಬೆದರಿಕೆ ಕಾರಣ ಎಂಬ ವರದಿಗಳು ಸತ್ಯಕ್ಕೆ ದೂರವಾದುವು ಎಂದು ಸ್ಪಷ್ಟಪಡಿಸಿದ್ದಾರೆ.
ಇಂಗ್ಲೆಂಡ್ ಮತ್ತು ದಕ್ಷಿಣ ಅಮೆರಿಕ ನಡುವಿನ ಸಮಯದ ಏರುಪೇರು ಹಾಗೂ ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು ಎಂಬ ನಿಲುವು ನಮ್ಮ ಈ ನಿರ್ಧಾರಕ್ಕೆ ಕಾರಣ ಎಂದೂ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.