ADVERTISEMENT

ಕೆನಡಾದಲ್ಲಿ 'ಕ್ಯಾಪ್ಸ್ ಕೆಫೆ' ಮೇಲೆ ಗುಂಡಿನ ದಾಳಿ: ಕಪಿಲ್ ಶರ್ಮಾ ಹೇಳಿದ್ದೇನು?

ಪಿಟಿಐ
Published 11 ಜುಲೈ 2025, 6:57 IST
Last Updated 11 ಜುಲೈ 2025, 6:57 IST
   

ಸರ್ರೆ(ಕೆನಡಾ): ಹಾಸ್ಯನಟ ಕಪಿಲ್ ಶರ್ಮಾ ಅವರು ಕೆನಡಾದ ಸರ್ರೆಯಲ್ಲಿ ಹೊಸದಾಗಿ ತೆರೆದ ಕ್ಯಾಪ್ಸ್ ಕೆಫೆ ಮೇಲೆ ಬುಧವಾರ ತಡರಾತ್ರಿ ಗುಂಡಿನ ದಾಳಿ ನಡೆದಿದೆ. ಘಟನೆಯ ಕುರಿತು ಮೊದಲ ಬಾರಿಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡ ಕಪಿಲ್ ಶರ್ಮಾ ಅವರು, 'ಈ ಘಟನೆ ನನ್ನನ್ನು ಆಘಾತಗೊಳಿಸಿದೆ. ಹಿಂಸಾಚಾರದ ವಿರುದ್ಧ ದೃಢವಾಗಿ ನಿಲ್ಲುತ್ತೇನೆ' ಎಂದು ಹೇಳಿದ್ದಾರೆ.

'ರುಚಿಕರವಾದ ಕಾಫಿ ಮತ್ತು ಸ್ನೇಹಪರ ಸಂಭಾಷಣೆಯ ಮೂಲಕ ಜನರಿಗೆ ಸಂತೋಷವನ್ನು ತರುವ ಭರವಸೆಯೊಂದಿಗೆ ನಾವು ಕ್ಯಾಪ್ಸ್ ಕೆಫೆಯನ್ನು ತೆರೆದಿದ್ದೇವೆ. ಆ ಕನಸಿಗೆ ಪೆಟ್ಟು ಬಿದ್ದರೆ ನಾವು ಅದನ್ನು ಸಹಿಸುವುದಿಲ್ಲ. ನಾವು ಮತ್ತೆ ಎದ್ದು ನಿಲ್ಲುತ್ತೇವೆ. ಅದೇ ಜಾಗದಲ್ಲಿ ಮರಳಿ ಕೆಫೆ ಪ್ರಾರಂಭಿಸುತ್ತೇವೆ. ಯಾವುದಕ್ಕೂ ಭಯ ಪಡುವುದಿಲ್ಲ' ಎಂದು ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ಇನ್‌ಸ್ಟಾ/@thekapscafe_

ಜುಲೈ 10ರಂದು ಬೆಳಗಿನ ಜಾವ 1.50ಕ್ಕೆ ಕ್ಯಾಪ್ಸ್ ಕೆಫೆ ಮೇಲೆ ಗುಂಡಿನ ದಾಳಿ ನಡೆದಿರುವ ಬಗ್ಗೆ ವರದಿಯಾಗಿದೆ. ಘಟನೆಯಲ್ಲಿ ಯಾರೊಬ್ಬರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಯ ಹೊಣೆಯನ್ನು ಖಾಲಿಸ್ತಾನಿ ಉಗ್ರ ಹರ್ಜೀತ್ ಸಿಂಗ್ ಲಡ್ಡಿ ಹೊತ್ತುಕೊಂಡಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.