ADVERTISEMENT

ಖಮೇನಿ ಹತ್ಯೆಗೆ ಖಂಡನೆ: ಪಾಕ್‌ನಲ್ಲಿ ಅಮೆರಿಕ ರಾಯಭಾರ ಕಚೇರಿ ಬಳಿ ಪ್ರತಿಭಟನೆ

ಪಿಟಿಐ
Published 3 ಮಾರ್ಚ್ 2026, 16:22 IST
Last Updated 3 ಮಾರ್ಚ್ 2026, 16:22 IST
   

ಲಾಹೋರ್‌/ಕರಾಚಿ: ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆ ಹಾಗೂ ಇದನ್ನು ಖಂಡಿಸಿ ಕರಾಚಿಯ ಅಮೆರಿಕ ರಾಯಭಾರ ಕಚೇರಿ ಬಳಿ ಪ್ರತಿಭಟನೆ ನಡೆಸುತ್ತಿದ್ದ 12 ಪಾಕಿಸ್ತಾನೀಯರನ್ನು ಅಮೆರಿಕ ಭದ್ರತಾ ಪಡೆ ಹತ್ಯೆ ಮಾಡಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಹಾಗೂ ಇತರ ಕಾರ್ಯಕರ್ತರು ರಾಯಭಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನಕಾರರನ್ನು ನಿಯಂತ್ರಿಸಲು ಮಹಿಳಾ ಪೊಲೀಸರು ಸೇರಿದಂತೆ ಕಚೇರಿ ಬಳಿ ಭಾರಿ ಪೊಲೀಸ್‌ ಭದ್ರತೆ ನಿಯೋಜಿಸಲಾಗಿತ್ತು. ಪ್ರತಿಭಟನಕಾರರು ಅಮೆರಿಕ ಹಾಗೂ ಇಸ್ರೇಲ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಪಾಕಿಸ್ತಾನದಲ್ಲಿರುವ ಅಮೆರಿಕ ರಾಯಭಾರ ಕಚೇರಿಯನ್ನು ತೆಗೆದು ಹಾಕಬೇಕು ಎಂದೂ ಒತ್ತಾಯಿಸಿದರು. 

ಅಲ್ಲದೇ ಪಾಕಿಸ್ತಾನ ಹಾಗೂ ಅಫ್ಗಾನಿಸ್ತಾನದ ನಡುವಿನ ಸಂಘರ್ಷಕ್ಕೆ ಶೀಘ್ರವೇ ಕದನ ವಿರಾಮ ಘೋಷಿಸಬೇಕು ಎಂದರು. 

ADVERTISEMENT

ಖಮೇನಿ ಹತ್ಯೆ ಖಂಡಿಸಿ ಪಾಕಿಸ್ತಾನದಲ್ಲಿ ನಡೆದ ಪ್ರತಿಭಟನೆಗಳಲ್ಲಿ ಈವರೆಗೆ 34 ಮಂದಿ ಸಾವಿಗೀಡಾಗಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.