ADVERTISEMENT

ಪಾಕಿಸ್ತಾನ: ಮೊದಲ ಹಿಂದೂ ಮಹಿಳಾ ಡಿಎಸ್‌ಪಿ ಆಗಿ ಮನೀಶಾ ಅಧಿಕಾರ ಸ್ವೀಕಾರ

ಪಿಟಿಐ
Published 29 ಜುಲೈ 2022, 14:10 IST
Last Updated 29 ಜುಲೈ 2022, 14:10 IST
ಮನೀಶಾ ರೊಪೇಟಾ
ಮನೀಶಾ ರೊಪೇಟಾ   

ಕರಾಚಿ:ಪಾಕಿಸ್ತಾನದಲ್ಲಿ ಮೊದಲ ಹಿಂದೂ ಮಹಿಳಾ ಡಿಎಸ್‌ಪಿಯಾಗಿ ಮನೀಶಾ ರೊಪೇಟಾ ಅವರು ನಿಯೋಜನೆಯಾಗಿದ್ದಾರೆ.

ರೊಪೇಟಾ (26) ಸಿಂಧ್‌ ಪ್ರಾಂತ್ಯದ ಜಕೋಬಾಬಾದ್‌ ಮೂಲದವರು. ಅವರು ಕಳೆದ ವರ್ಷ ಸಿಂಧ್‌ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು. 152 ಅಭ್ಯರ್ಥಿಗಳ ಪೈಕಿ 16ನೇ ರ‍್ಯಾಂಕ್‌ ಪಡೆದಿದ್ದರು. ಅನಂತರ ತರಬೇತಿಯಲ್ಲಿದ್ದ ಅವರನ್ನು ಸದ್ಯ ಲ್ಯಾರಿ ಪ್ರದೇಶದ ಡಿಎಸ್‌ಪಿಯಾಗಿ ನಿಯೋಜನೆ ಮಾಡಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಅವರು, ‘ಮಹಿಳೆಯರು ಶಿಕ್ಷಣ ಪಡೆದು, ಉದ್ಯೋಗಕ್ಕೆ ಸೇರಲು ಬಯಸಿದರೆ ಶಿಕ್ಷಕಿ ಅಥವಾ ವೈದ್ಯೆ ಎಂಬ ಆಯ್ಕೆ ಮಾತ್ರ ನೀಡುತ್ತಿದ್ದ ಪುರುಷ ಪ್ರಧಾನ ವ್ಯವಸ್ಥೆಯನ್ನು ನಾನು ಮತ್ತು ನನ್ನ ಸಹೋದರಿ ಚಿಕ್ಕಂದಿನಿಂದಲೂ ನೋಡುತ್ತಾ ಬಂದಿದ್ದೆವು. ಈ ಪರಿಕಲ್ಪನೆಯನ್ನು ತೊಡೆದುಹಾಕಿ ಪೊಲೀಸ್‌ ಸೇವೆಗೆ ಸೇರಿದ್ದೇನೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.