
ಬೀಜಿಂಗ್: ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರ ಜೊತೆ ವಿಡಿಯೊ ಕರೆ ಮೂಲಕ ಬುಧವಾರ ಮಾತುಕತೆ ನಡೆಸಿದ ರಷ್ಯಾದ ಆಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಚೀನಾದೊಂದಿಗೆ ತಮ್ಮ ದೇಶದ ಆರ್ಥಿಕ ಸಹಕಾರ ವೃದ್ಧಿಯಾಗುತ್ತಿರುವುದನ್ನು ಶ್ಲಾಘಿಸಿದರು.
ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದ ವಿಚಾರವಾಗಿ ಭಿನ್ನಾಭಿಪ್ರಾಯಗಳಿದ್ದರೂ ಚೀನಾದೊಂದಿಗಿನ ಸಹಕಾರವನ್ನು ವೃದ್ಧಿಸಲು ಬಯಸುವ ಪಾಶ್ಚಿಮಾತ್ಯ ನಾಯಕರೊಂದಿಗೆ ಜಿನ್‌ಪಿಂಗ್ ನಡೆಸುತ್ತಿರುವ ಸರಣಿ ಸಭೆಯ ಭಾಗವಾಗಿ ಈ ಮಾತುಕತೆ ನಡೆಯಿತು.
ಪಾಶ್ಚಿಮಾತ್ಯ ಆರ್ಥಿಕ ನಿಬಂಧನೆಗಳಿಂದ ಸ್ವಲ್ಪ ಮಟ್ಟಿನ ವಿನಾಯಿತಿ ನೀಡುವ ಜೊತೆಗೆ ರಷ್ಯಾದೊಂದಿಗಿನ ವ್ಯಾಪಾರ ವಹಿವಾಟನ್ನು ಚೀನಾ ಮುಂದುವರಿಸಲಿದೆ.
'ಉಭಯ ದೇಶಗಳ ಸಾರ್ವಭೌಮತೆ ಮತ್ತು ಭದ್ರತೆ ವಿಚಾರದಲ್ಲಿ ಪೂರ್ಣ ಸಹಕಾರ ನೀಡುತ್ತೇವೆ ಎನ್ನುವುದನ್ನು ಮತ್ತೊಮ್ಮೆ ಖಚಿತಪಡಿಸುತ್ತೇವೆ’ ಎಂದು ಪುಟಿನ್ ತಿಳಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಕೆಲವು ನಿರ್ಧಾರಗಳ ಬಗ್ಗೆ ಅಸಮಾಧಾನ ಹೊಂದಿರುವ ಅವರ ಕೆಲ ಮಿತ್ರರಾಷ್ಟ್ರಗಳು ನಿಧಾನವಾಗಿ ಚೀನಾದತ್ತ ಒಲವು ತೋರುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.