ಇರಾನ್‌ನ ಫೋರ್ಡೊ ಪರಮಾಣು ಘಟಕದ ಉಪಗ್ರಹ ಚಿತ್ರ
(ರಾಯಿಟರ್ಸ್ ಚಿತ್ರ)
ಮಾಸ್ಕೊ: ಇರಾನ್‌ನ ಪರಮಾಣು ಘಟಕಗಳ ಮೇಲೆ ಅಮೆರಿಕ ನಡೆಸಿದ ದಾಳಿಯನ್ನು ರಷ್ಯಾ ಖಂಡಿಸಿದ್ದು, ಇದು ‘ಅಪ್ರಚೋದಿತ ಆಕ್ರಮಣ’ ಎಂದು ಹೇಳಿದೆ.
‘ಇರಾನ್ ಮೇಲೆ ನಡೆದಿರುವ ಅಪ್ರಚೋದಿತ ದಾಳಿಗೆ ಯಾವುದೇ ಸಮರ್ಥನೆ ಇಲ್ಲ. ದಾಳಿಯನ್ನು ಒಪ್ಪಲಾಗದು’ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದರು.
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರು ಸೋಮವಾರ ಮಾಸ್ಕೊದಲ್ಲಿ ರಷ್ಯಾ ಅಧ್ಯಕ್ಷರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಇದರ ಬೆನ್ನಲ್ಲೇ ಪುಟಿನ್ ಹೇಳಿಕೆ ಹೊರಬಿದ್ದಿದ್ದು, ಇರಾನ್‌ಗೆ ರಷ್ಯಾದ ಬೆಂಬಲವನ್ನು ಪುನರುಚ್ಚರಿಸಿದ್ದಾರೆ.
ಇರಾನ್ ಜತೆಗಿನ ದೀರ್ಘಕಾಲದ ವಿಶ್ವಾಸಾರ್ಹ ಸಂಬಂಧವನ್ನು ಉಲ್ಲೇಖಿಸಿದ ಅವರು, ‘ಇರಾನ್ ಜನರಿಗೆ ಸಹಾಯ ಮಾಡಲು ಎಲ್ಲ ರೀತಿಯಿಂದಲೂ ಪ್ರಯತ್ನಿಸುತ್ತಿದ್ದೇವೆ’ ಎಂದರು. ಆದರೆ, ಇರಾನ್‌ಗೆ ಸೇನಾ ನೆರವು ಒದಗಿಸುವ ಕುರಿತು ಪುಟಿನ್ ಯಾವುದೇ ಹೇಳಿಕೆ ನೀಡಲಿಲ್ಲ.
ಇರಾನ್– ಇಸ್ರೇಲ್ ನಡುವೆ ಜೂನ್ 13ರಂದು ಸಂಘರ್ಷ ಆರಂಭವಾದಾಗಿನಿಂದಲೂ, ಇರಾನ್‌ಗೆ ಮಿಲಿಟರಿ ಸಹಾಯ ನೀಡುವ ಬಗ್ಗೆ ರಷ್ಯಾ ಬಹಿರಂಗವಾಗಿ ಯಾವುದೇ ಹೇಳಿಕೆ ಕೊಟ್ಟಿಲ್ಲ. ಇಸ್ರೇಲ್ ಮತ್ತು ಅಮೆರಿಕದ ದಾಳಿಯನ್ನು ಖಂಡಿಸಿದ್ದಕ್ಕೆ ಅರಾಗ್ಚಿ ಅವರು ರಷ್ಯಾಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.