ADVERTISEMENT

ಸಂದೇಹವೇ ಇಲ್ಲ, ಉಕ್ರೇನ್ ವಿರುದ್ಧ ಜಯ ನಮ್ಮದೇ: ರಷ್ಯಾ ಅಧ್ಯಕ್ಷ ಪುಟಿನ್

ಏಜೆನ್ಸೀಸ್
Published 18 ಜನವರಿ 2023, 14:07 IST
Last Updated 18 ಜನವರಿ 2023, 14:07 IST
ಪುಟಿನ್
ಪುಟಿನ್   

ಸೇಂಟ್ ಪೀಟರ್ಸ್‌ಬರ್ಗ್: ಉಕ್ರೇನ್ ವಿರುದ್ಧ ಖಂಡಿತವಾಗಿಯೂ ನಾವು ಗೆಲ್ಲಲಿದ್ದೇವೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭರವಸೆ ವ್ಯಕ್ತಪಡಿಸಿದ್ದಾರೆ.

ಬುಧವಾರ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿಯ ಫ್ಯಾಕ್ಟರಿ ಕಾರ್ಮಿಕರ ಸಮಾವೇಶದಲ್ಲಿ ಅವರು ದೇಶಾಭಿಮಾನದ ಬಗ್ಗೆ ಮಾತನಾಡಿದರು.

‘ನಾವು ಉಕ್ರೇನ್ ಮೇಲೆ ಹಿಡಿತ ಸಾಧಿಸುತ್ತೇವೆ. ಇದರಲ್ಲಿ ಯಾವುದೇ ಸಂದೇಹವಿಲ್ಲ. ಖಂಡಿತವಾಗಿಯೂ ನಾವು ಗೆಲ್ಲಲಿದ್ದೇವೆ’ ಎಂದಿದ್ದಾರೆ.

ADVERTISEMENT

‘ರಷ್ಯಾದ ಏಕತೆ, ಸಾರ್ವಭೌಮತೆಯನ್ನು ಯಾರು ಪ್ರಶ್ನಿಸಲಾಗದು. ರಷಿಯನ್ ಜನರ ಧೈರ್ಯ ನಾಯಕತ್ವ ಹೋರಾಟದ ಗುಣವನ್ನು ನಾವು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅತ್ತ ಉಕ್ರೇನ್ ಮೇಲೆ ರಷ್ಯಾದ ದಾಳಿ ಮುಂದುವರೆದಿದ್ದು ಉಕ್ರೇನ್‌ನ ನಿಪ್ರೊ ನಗರದ ಗೋಪುರ ಅ‍ಪಾರ್ಟ್‌ಮೆಂಟ್‌ ಮೇಲೆ ರಷ್ಯಾ ಶನಿವಾರ ತಡರಾತ್ರಿ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಮಡಿದವರ ಸಂಖ್ಯೆ 40ಕ್ಕೆ ತಲುಪಿದೆ. 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಹಲವರು ನಾಪತ್ತೆಯಾಗಿದ್ದಾರೆ.

1,700 ನಿವಾಸಿಗಳು ವಾಸವಿದ್ದ ಅ‍ಪಾರ್ಟ್‌ಮೆಂಟ್‌ ಗುರಿಯಾಗಿಸಿ ರಷ್ಯಾ ಸೇನೆ ಕೆಎಚ್‌–22 ಕ್ಷಿಪಣಿಯನ್ನು ಕರ್ಸ್ಕ್‌ ಪ್ರದೇಶದಿಂದ ಉಡಾಯಿಸಿತ್ತು. ಸೋಮವಾರ ಕೆರ್ಸಾನ್, ಝಪೊರಿಝಿಯಾ ನಗರಗಳ ಮೇಲೆ ಪಡೆಗಳು ಶೆಲ್‌ ದಾಳಿ ಮುಂದುವರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.