ADVERTISEMENT

ಬ್ರಿಟನ್ ರಾಣಿ ಎಲಿಜಬೆತ್ ಪತಿ ಫಿಲಿಪ್ ಆಸ್ಪತ್ರೆಗೆ ದಾಖಲು

ರಾಯಿಟರ್ಸ್
Published 17 ಫೆಬ್ರುವರಿ 2021, 15:14 IST
Last Updated 17 ಫೆಬ್ರುವರಿ 2021, 15:14 IST
ರಾಜ ಫಿಲಿಪ್ – ಎಎಫ್‌ಪಿ ಸಂಗ್ರ ಚಿತ್ರ
ರಾಜ ಫಿಲಿಪ್ – ಎಎಫ್‌ಪಿ ಸಂಗ್ರ ಚಿತ್ರ   

ಇಂಗ್ಲೆಂಡ್: ಬ್ರಿಟನ್ ರಾಣಿ ಎಲಿಜಬೆತ್ ಪತಿ, ರಾಜ ಫಿಲಿಪ್ ಅಸ್ವಸ್ಥರಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಂಕಿಂಗ್‌ಹ್ಯಾಂ ಅರಮನೆ ಪ್ರಕಟಣೆ ತಿಳಿಸಿದೆ.

‘ರಾಜಮನೆತನದ ವೈದ್ಯರ ಸಲಹೆ ಮೇರೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಫಿಲಿಪ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲೇ ವೈದ್ಯರ ನಿಗಾದಲ್ಲಿ ಇರಲಿದ್ದು, ವಿಶ್ರಾಂತಿ ಪಡೆಯಲಿದ್ದಾರೆ’ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.