ADVERTISEMENT

‘ಬ್ರಿಟನ್: ನೂತನ ಪ್ರಧಾನಿ ಪದಗ್ರಹಣ ಕಾರ್ಯಕ್ರಮ ಸ್ಕಾಟ್ಲೆಂಡ್‌ ಅರಮನೆಯಲ್ಲಿ ’

ಪಿಟಿಐ
Published 26 ಆಗಸ್ಟ್ 2022, 13:51 IST
Last Updated 26 ಆಗಸ್ಟ್ 2022, 13:51 IST
ರಾಣಿ ಎರಡನೇ ಎಲಿಜಬೆತ್
ರಾಣಿ ಎರಡನೇ ಎಲಿಜಬೆತ್   

ಲಂಡನ್: ಪ್ರಧಾನಿ ಸ್ಥಾನಕ್ಕೆ ಆಯ್ಕೆಯಾಗುವ ನೂತನ ನಾಯಕನ ಅಧಿಕಾರ ಸ್ವೀಕಾರ ಕಾರ್ಯಕ್ರಮವನ್ನು ಇದೇ ಮೊದಲ ಬಾರಿಗೆ ಸ್ಕಾಟ್ಲೆಂಡ್‌ನ ತಮ್ಮ ಬಲ್ಮೊರಲ್ ಕ್ಯಾಸಲ್‌ನಲ್ಲಿರುವ ತಮ್ಮ ಅರಮನೆಯಲ್ಲಿ ಆಯೋಜಿಸಲು ಬ್ರಿಟನ್‌ನ ರಾಣಿ ಎರಡನೇ ಎಲಿಜಬೆತ್‌ ಮುಂದಾಗಿದ್ದಾರೆ ಎಂದು ಮಾಧ್ಯಮಗಳು ಶುಕ್ರವಾರ ವರದಿ ಮಾಡಿವೆ.

96 ವರ್ಷದ ರಾಣಿ ಎಲಿಜಬೆತ್‌ ಅವರು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ನಡೆದಾಡುವುದು ಕಷ್ಟವಾಗುತ್ತಿದೆ. ಹೀಗಾಗಿ, ಅವರು ವಿಶ್ರಾಂತಿಗಾಗಿ ಬಲ್ಮೊರಲ್‌ ಕ್ಯಾಸಲ್‌ನ ಅರಮನೆಯಲ್ಲಿ ತಂಗಿದ್ದಾರೆ ಎಂದು‘ದಿ ಸನ್’ ಪತ್ರಿಕೆ ವರದಿ ಮಾಡಿದೆ.

ಮಾಜಿ ಸಚಿವ ರಿಷಿ ಸುನಕ್‌ ಹಾಗೂ ವಿದೇಶಾಂಗ ಕಾರ್ಯದರ್ಶಿ ಲಿಜ್‌ ಟ್ರಸ್‌ ಅವರು ಪ್ರಧಾನಿ ಹುದ್ದೆಗಾಗಿ ನಡೆಯುವ ಚುನಾವಣೆಯ ಅಂತಿಮ ಕಣದಲ್ಲಿದ್ದಾರೆ. ಈ ಇಬ್ಬರಲ್ಲಿ ಚುನಾಯಿತರಾಗುವವರನ್ನು ಬಲ್ಮೊರಲ್‌ ಕ್ಯಾಸಲ್‌ ಅರಮನೆಗೇ ಆಹ್ವಾನಿಸಿ, ಪ್ರತಿಜ್ಞಾವಿಧಿ ಬೋಧಿಸಲು ಯೋಜಿಸಲಾಗಿದೆ. ಆದರೆ, ಈ ಕುರಿತ ಅಂತಿಮ ನಿರ್ಧಾರ ಮುಂದಿನ ವಾರ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಪತ್ರಿಕೆ ಹೇಳಿದೆ.

ADVERTISEMENT

ಟೋರಿ ಪಕ್ಷದ ನೂತನ ನಾಯಕನ ಆಯ್ಕೆ ಸೆಪ್ಟೆಂಬರ್‌ 5ರಂದು ನಡೆಯಲಿದೆ. ಪಕ್ಷದ ನೂತನ ನಾಯಕನಾಗಿ ಆಯ್ಕೆಯಾಗುವವರೇ ಬ್ರಿಟನ್‌ನ ಪ್ರಧಾನಿಯೂ ಆಗುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.