ಎಚ್ಎಂಪಿವಿ
ಬೀಜಿಂಗ್: ಉತ್ತರ ಚೀನಾದಲ್ಲಿ ಎಚ್ಎಂಪಿವಿ ಸೋಂಕಿನ ಪ್ರಮಾಣ ಇಳಿಕೆಯಾಗಿದೆ ಎಂದು ಅಲ್ಲಿನ ಆರೋಗ್ಯ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
‘ಹ್ಯೂಮನ್ ಮೆಟಾನ್ಯುಮೋ ವೈರಸ್ (ಎಚ್‌ಎಂಪಿವಿ) ಹೊಸದಲ್ಲ. ಹಲವು ದಶಕಗಳಿಂದ ಅದು ಪ್ರಕೃತಿಯಲ್ಲಿದೆ’ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ನಡೆಸಿದ ಸುದ್ದಿಗೋಷ್ಠಿಯಲ್ಲಿ ಚೀನಾದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರದ ಸಂಶೋಧಕ ವಾಂಗ್ ಲಿಪಿಂಗ್ ಅವರು ಹೇಳಿದ್ದಾರೆ.
‘ಎಚ್‌ಎಂಪಿವಿ ಸೋಂಕಿತರ ಸಂಖ್ಯೆಯಲ್ಲಿ ಏರಿಳಿತಗಳಾಗುತ್ತಿದ್ದು, ಉತ್ತರ ಚೀನಾದಲ್ಲಿ ಇಳಿಕೆಯಾಗಿದೆ. 14 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲೂ ಸೋಂಕಿನ ಪ್ರಮಾಣ ಕ್ಷೀಣಿಸಿದೆ’ ಎಂದು ಹೇಳಿದ್ದಾರೆ.
‘ಪ್ರಸ್ತುತ ಜನರಿಗೆ ಉಂಟಾಗುತ್ತಿರುವ ಉಸಿರಾಟದ ಸಮಸ್ಯೆಯು ಈ ಹಿಂದೆ ಇದ್ದ ರೋಗಕಾರಕಗಳಿಂದಲೇ ಉಂಟಾಗಿದೆ. ಹೊಸ ಸಾಂಕ್ರಾಮಿಕ ರೋಗ ಪತ್ತೆಯಾಗಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.