

ನ್ಯೂಯಾರ್ಕ್: ಜನಪ್ರಿಯ ‘ರೆಗೆ’ (ಜಮೈಕಾ ಮೂಲದ ಸಂಗೀತ ಪ್ರಕಾರ) ಗಾಯಕ ಮತ್ತು ನಟ ಜಿಮ್ಮಿ ಕ್ಲಿಫ್ (81) ಅವರು ನಿಧನರಾದರು.
‘ನ್ಯುಮೋನಿಯಾ ಬಳಿಕ ಕಾಣಿಸಿಕೊಂಡ ಮೂರ್ಛೆ ಸಮಸ್ಯೆಯಿಂದ ಅವರು ಮೃತಪಟ್ಟರು’ ಎಂದು ಜಿಮ್ಮಿ ಅವರ ಕುಟುಂಬಸ್ಥರು ಸೋಮವಾರ ಸಾಮಾಜಿಕ ಮಾಧ್ಯಮದ ಮೂಲಕ ತಿಳಿಸಿದ್ದಾರೆ.
‘ನಿಮ್ಮ ಬೆಂಬಲವೇ ಅವರ ವೃತ್ತಿ ಜೀವನಕ್ಕೆ ಶಕ್ತಿಯಾಗಿತ್ತು. ಪ್ರತಿಯೊಬ್ಬರ ಪ್ರೀತಿ ಮತ್ತು ಬೆಂಬಲಕ್ಕೆ ಅವರು ಆಭಾರಿಯಾಗಿದ್ದರು’ ಎಂದು ತಿಳಿಸಿದ್ದಾರೆ.
ಜಮೈಕಾ ಮೂಲದ ಸಂಗೀತ ಪ್ರಕಾರವನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಜಿಮ್ಮಿ ಅವರಿಗೆ ಸಲ್ಲುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.