ADVERTISEMENT

ಸಿರಿಯಾ: 30 ಜನರ ಅವಶೇಷ ಪತ್ತೆ

​ಪ್ರಜಾವಾಣಿ ವಾರ್ತೆ
Published 12 ಮೇ 2025, 16:14 IST
Last Updated 12 ಮೇ 2025, 16:14 IST
.
.   

ಡಮಾಸ್ಕಸ್‌(ಸಿರಿಯಾ): ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಉಗ್ರರಿಂದ ಹತ್ಯೆಯಾಗಿದ್ದಾರೆ ಎನ್ನಲಾದ 30 ಮಂದಿಯ ಅವಶೇಷಗಳು ಸಿರಿಯಾದ ಪಟ್ಟಣವೊಂದರಲ್ಲಿ ಪತ್ತೆಯಾಗಿವೆ.

ದಾಬಿಕ್‌ ಪಟ್ಟಣದಲ್ಲಿ ಶೋಧ ಮುಂದುವರಿದಿದ್ದು, ಮೃತರ ಗುರುತು ಪತ್ತೆ ಹಚ್ಚಲು ಡಿಎನ್‌ಎ ಪರೀಕ್ಷೆ ನಡೆದಿದೆ ಎಂದು ಕತಾರ್‌ನ ಆಂತರಿಕ ಭದ್ರತಾ ಪಡೆಗಳು ಸೋಮವಾರ ತಿಳಿಸಿವೆ.

ಐಎಸ್‌ ಉಗ್ರರು ಅರ್ಧ ದಶಕಕ್ಕೂ ಹೆಚ್ಚಿನ ಅವಧಿ ಸಿರಿಯಾ ಮತ್ತು ಇರಾಕ್‌ನ ಬಹುಭಾಗವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿದ್ದರು. 2019ರವರೆಗೂ ಈ ಪ್ರದೇಶಗಳು ಭಯೋತ್ಪಾದಕರ ಆಡಳಿತಕ್ಕೊಳಪಟ್ಟಿದ್ದವು. ಈ ಅವಧಿಯಲ್ಲಿ ಪತ್ರಕರ್ತರು, ನೆರವು ನೀಡುವ ಕಾರ್ಯಕರ್ತರು ಸೇರಿದಂತೆ ವಿದೇಶಿಯರನ್ನು ಕೊಲ್ಲಲಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.