ADVERTISEMENT

‘ಅಗತ್ಯವಿರುವಷ್ಟು ಯುರೇನಿಯಂ ಸಂಗ್ರಹ’

ಏಜೆನ್ಸೀಸ್
Published 4 ಜುಲೈ 2019, 19:30 IST
Last Updated 4 ಜುಲೈ 2019, 19:30 IST
ಹಸನ್‌ ರೌಹಾನಿ
ಹಸನ್‌ ರೌಹಾನಿ   

ಟೆಹರಾನ್‌: ‘ನಮ್ಮ ಅಗತ್ಯಕ್ಕೆ ತಕ್ಕಂತೆ ಯುರೇನಿಯಂ ಸಂಗ್ರಹ ಮಾಡುತ್ತೇವೆ. ಭಾನುವಾರದಿಂದ ಯುರೇನಿಯಂ ಸಂಗ್ರಹ ಹೆಚ್ಚಿಸುವುದನ್ನು ಆರಂಭಿಸಲಿದ್ದೇವೆ’ ಎಂದು ಇರಾನ್‌ ಅಧ್ಯಕ್ಷ ಹಸನ್‌ ರೌಹಾನಿ ಹೇಳಿದ್ದಾರೆ.

ಯುರೋಪಿಯನ್‌ ರಾಷ್ಟ್ರಗಳ ಜತೆಗಿನ ಪರಮಾಣು ಒಪ್ಪಂದ ಉಳಿಸಿಕೊಳ್ಳುವ ಸಲುವಾಗಿ ಒತ್ತಡ ಹೇರಲು ಮತ್ತು ಅಮೆರಿಕದ ನಿರ್ಬಂಧಕ್ಕೆ ಪರ್ಯಾಯ ಮಾರ್ಗಕ್ಕಾಗಿ ಅವರು ಈ ಹೇಳಿಕೆ ನೀಡಿದ್ದಾರೆ.

‘2015ರ ಪರಮಾಣು ಒಪ್ಪಂದದ ಪ್ರಕಾರ ನಿಗದಿಗೊಳಿಸಿರುವ ಮಿತಿಯನ್ನು ಮೀರಿ, ನಮ್ಮ ಅಗತ್ಯಕ್ಕೆ ತಕ್ಕಂತೆ ಯುರೇನಿಯಂ ಸಂಗ್ರಹ ಮಾಡುತ್ತೇವೆ. ಜುಲೈ 7ರಿಂದ ನಮ್ಮ ಯುರೇನಿಯಂ ಪುಷ್ಟೀಕರಣ ಮಟ್ಟ 3.67 ಆಗಿರುವುದಿಲ್ಲ. ಈ ಕುರಿತ ಬದ್ಧತೆಯನ್ನು ಬದಿಗಿರಿಸಿ ಪುಷ್ಟೀಕರಣ ಮಟ್ಟವನ್ನು ನಮಗೆ ಬೇಕಾದಷ್ಟು ಹೆಚ್ಚಿಸಲಿದ್ದೇವೆ‘ ಎಂದಿದ್ದಾರೆ.

ADVERTISEMENT

‘ಈ ನಿಮ್ಮ ಬೆದರಿಕೆ ಒಡ್ಡುವ ಮೊದಲು ಎಚ್ಚರದಿಂದಿರಿ. ಈ ಮುಂಚೆ ಯಾರೂ ನೀಡದಂಥ ಪೆಟ್ಟನ್ನು ನೀಡುತ್ತೇವೆ. ಇದು ನಿಮಗೆ ತಿರುಗುಬಾಣವಾಗಲಿದೆ‘ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಟ್ವೀಟ್‌ ಮೂಲಕ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.