ಕೀವ್: ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರದ ಮುಖ್ಯಸ್ಥನನ್ನು ರಷ್ಯಾ ಅಪಹರಣ ಮಾಡಿದೆ ಎಂದು ಶನಿವಾರ ಉಕ್ರೇನ್ ಆರೋಪಿಸಿದೆ.
ರಷ್ಯಾ ಸೇನಾಪಡೆಗಳು ಝಪೊರಿಝಿಯಾ ಪರಮಾಣು ವಿದ್ಯುತ್ ಸ್ಥಾವರದ ಪ್ರಧಾನ ನಿರ್ದೇಶಕ ಇಹೋರ್ ಮುರಶೋವ್ ಅವರನ್ನು ಶುಕ್ರವಾರ ಸಂಜೆ ಅಪಹರಣ ಮಾಡಿವೆ.ಅವರ ಕಾರನ್ನು ರಷ್ಯಾ ಪಡೆಗಳು ತಡೆದು, ಕಣ್ಣಿಗೆ ಬಟ್ಟೆ ಕಟ್ಟಿ, ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದೆ ಎಂದುಉಕ್ರೇನ್ ಸರ್ಕಾರಿ ಪರಮಾಣು ಕಂಪನಿ ಎನರ್ಗೋಟಮ್ ಆರೋಪಿಸಿದೆ.
‘ಮುಖ್ಯಸ್ಥರ ಬಂಧನವು ಉಕ್ರೇನ್ ಮತ್ತು ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರದ ಸುರಕ್ಷತೆಗೆ ಅಪಾಯ ಉಂಟು ಮಾಡುತ್ತದೆ.ಮುರಶೋವ್ ಅವರನ್ನು ರಷ್ಯಾ ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಎನರ್ಗೋಟಮ್ ಅಧ್ಯಕ್ಷ ಪೆಟ್ರೋ ಕೋಟಿನ್ ಆಗ್ರಹಿಸಿದರು. ಉಕ್ರೇನ್ ಆರೋಪಕ್ಕೆ ರಷ್ಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.