

ಬಾಂಬ್ ದಾಳಿ
(ಪ್ರಾತಿನಿಧಿಕ ಚಿತ್ರ)
ಕೀವ್: ಉಕ್ರೇನ್‌ನ ಕೀವ್ ಮೇಲೆ ರಷ್ಯಾವು ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದ್ದು, ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಉಕ್ರೇನ್‌ನ ತುರ್ತು ಸೇವೆ ಭಾನುವಾರ ತಿಳಿಸಿದೆ.
ರಷ್ಯಾದ ದಾಳಿಯು ಕೀವ್ ನಗರದ ಅಂಚಿನಲ್ಲಿರುವ ಐದು ಜಿಲ್ಲೆಗಳ ಮೇಲೆ ಪರಿಣಾಮ ಬೀರಿದೆ. ನಾಶವಾದ ಕಟ್ಟಡಗಳ ಅವಶೇಷದಡಿ ಸಿಲುಕಿದ್ದ ಒಂದು ಮಗು ಸೇರಿದಂತೆ ಎಂಟು ಜನರನ್ನು ರಕ್ಷಿಸಲಾಗಿದೆ ಎಂದು ಅದು ತಿಳಿಸಿದೆ.
ಅಲ್ಲದೇ, ಉಕ್ರೇನ್‌ನ ಇಂಧನ ಮೂಲಸೌಕಾರ್ಯದ ಮೇಲೆ ದಾಳಿ ನಡೆಸಿದ್ದು, ಪರಿಣಾಮ ವ್ಯಾಪಕ ಬೆಂಕಿ ಆವರಿಸಿತು. ಬಳಿಕ ಅದನ್ನು ನಂದಿಸಲಾಯಿತು ಎಂದು ತುರ್ತು ಸೇವೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.